ಗುರುವಾರ , ಮಾರ್ಚ್ 4, 2021
19 °C

ವಿದ್ಯುತ್ ಶುಲ್ಕ ಮನ್ನಾಕ್ಕೆ ಕಾಂಗ್ರೆಸ್ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಬಡ, ಮಧ್ಯಮ ವರ್ಗದ ಜನರಿಗೆ ಮೂರು ತಿಂಗಳು ವಿದ್ಯುತ್ ಶುಲ್ಕ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ನೇತೃತ್ವದಲ್ಲಿ ಕಾರ್ಯಕರ್ತರು ಗುರುವಾರ ಮೆಸ್ಕಾಂ ಎಂಜಿನಿಯರ್‌ಗೆ ಮನವಿ ಸಲ್ಲಿಸಿದರು. 

ಗೃಹ ಬಳಕೆಯ ಎಲ್ಲ ಮೂರು ತಿಂಗಳ ವಿದ್ಯುತ್ ಶುಲ್ಕ ರದ್ದು ಮಾಡಬೇಕು. ಜನರು ದುಡಿಮೆ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಕೆಲಸ ಕಾರ್ಯ ಇಲ್ಲ. ರೈತರು, ಕೂಲಿ ಕಾರ್ಮಿಕರು, ವಾಹನ ಚಾಲಕರು, ಪ್ರತಿ ವರ್ಗದವರೂ ನಷ್ಟ ಅನುಭವಿಸುತ್ತಿದ್ದಾರೆ. ಊಟಕ್ಕೂ ಪರಡಾಡುವ ಪರಿಸ್ಥಿತಿಯಲ್ಲಿ ಕಡುಬಡವರಿದ್ದಾರೆ. ಬಡವರು ಸರ್ಕಾರ ವಿತರಿಸುವ ಅಕ್ಕಿ ಬಳಸುತ್ತಿದ್ದಾರೆ. ಮಧ್ಯಮ ವರ್ಗ ನೆರವಿಲ್ಲದೇ, ದುಡಿಮೆಯೂ ಇಲ್ಲದೇ ಹಸಿವಿನಿಂದ ಬಳಲುತ್ತಿದೆ ಎಂದು ಚಿತ್ರಣ ಬಿಚ್ಚಿಟ್ಟರು.

ಲೇವಾದೇವಿದಾರರು ಸಾಲ ಕಟ್ಟಲು ಒತ್ತಾಯಿಸಬಾರದು. ಮನೆ ಬಾಡಿಗೆ ಕೊಡುವಂತೆ ಮಾಲೀಕರು ಬಲವಂತ ಮಾಡಬಾರದು.  ವಿದ್ಯುತ್ ಶುಲ್ಕ ವತಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ,ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಬೆದರಿಸುತ್ತಿದ್ದಾರೆ. ಹಾಗಾಗಿ, ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಕಂಡರಾದ ಕವಿತಾ, ಸಂತೋಷ್, ಅರ್ಜುನ್, ರಾಘವೇಂದ್ರ ಮನವಿ ಸಲ್ಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು