ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ ಸಾಕಷ್ಟು ಅನುಭವ ಕಲಿಸಿದೆ: ಶುಶ್ರೂಷಕ ವರುಣ್

ಮೆಗ್ಗಾನ್ ಆಸ್ಪತ್ರೆಯ ಶುಶ್ರೂಷಕ ವರುಣ್ ಹೇಳಿಕೆ
Last Updated 2 ಮೇ 2021, 6:58 IST
ಅಕ್ಷರ ಗಾತ್ರ

ಶಿವಮೊಗ್ಗ: ತಂದೆಯ ಆಸೆಯಂತೆ ವೈದ್ಯಕೀಯ ಕ್ಷೇತ್ರಕ್ಕೆ ಬಂದು 14 ವರ್ಷಗಳು ಕಳೆದಿವೆ. ಅದರೆ, ಇಷ್ಟು ವರ್ಷ ಅನುಭವದಲ್ಲಿ ಕೊರೊನಾ ಸಾಕಷ್ಟು ಅನುಭವ ಕಲಿಸಿದೆ ಎಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕ ವರುಣ್ ತಮ್ಮ ಅನುಭವ ಹಂಚಿಕೊಂಡರು.

‘ದಿನಕ್ಕೆ ಆರು ಗಂಟೆ ಕಾಲ ಪಿಪಿಇ ಕಿಟ್ ಹಾಕಿಕೊಂಡು ಕೆಲಸ ನಿರ್ವಹಣೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಈ ಅವಧಿಯಲ್ಲಿ ತುರ್ತು ಎಂದರೂ ಪಿಪಿಇ ಕಿಟ್ ತೆಗೆಯುವಂತಿಲ್ಲ. ನೀರು ಕುಡಿಯಲು ಸಾಧ್ಯವಾಗುವುದಿಲ್ಲ. ಇಂತಹ ಸಂದಿಗ್ಧತೆಯಲ್ಲಿ ಕೆಲಸ ಮಾಡುವ ಅನುಭವವೇ ಬೇರೆ. ಇಲ್ಲಿ ಅನೇಕ ಶುಶ್ರೂಷಕಿಯರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಮಧ್ಯೆಯೂ ನಾವು ಕೆಲಸ ಮಾಡಬೇಕಿದೆ’ ಎಂದು ಹೇಳುತ್ತಾರೆ.

‘ಬಳಹಷ್ಟು ಮಂದಿ ಕೊರೊನಾ ಉಲ್ಬಣಗೊಂಡಾಗ ಬರುತ್ತಾರೆ. ವೈದ್ಯರ ಕೈಯಲ್ಲಿ ಏನೂ ಮಾಡಲು ಸಾಧ್ಯವಿರುವುದಿಲ್ಲ. ಇದರಿಂದಾಗಿ ಅನೇಕ ಮಂದಿ ಸಾವನ್ನಪ್ಪುತ್ತಿದ್ದಾರೆ. ಬಹಳಷ್ಟು ಜನರು ಕೊರೊನಾ ಲಕ್ಷಣದ ಬಗ್ಗೆ ಆರಂಭದಲ್ಲಿ ನಿರ್ಲಕ್ಷ್ಯ ಮಾಡುತ್ತಾರೆ. ಸ್ಥಳೀಯ ವೈದ್ಯರ ಬಳಿ ಹೋಗಿ ಮಾತ್ರೆ ತೆಗೆದುಕೊಂಡು ಬಂದು ಸುಮ್ಮನಾಗುತ್ತಾರೆ. ವೈರಸ್ ಕೊನೆ ಹಂತ ತಲುಪಿದಾಗ ಆರೋಗ್ಯ ಸ್ಥಿತಿ ಬಿಗಾಡಿಸುತ್ತದೆ. ಈ ಹಂತದಲ್ಲಿ ಆಸ್ಪತ್ರೆಗೆ ಬಂದು ದಾಖಲಾಗುತ್ತಿದ್ದಾರೆ. ಈ ಕಾರಣಕ್ಕೆ ಸಾಕಷ್ಟು ಜನ ಸಾವನ್ನಪ್ಪುತ್ತಿದ್ದಾರೆ’ ಎಂದು ವರುಣ್ ಹೇಳುತ್ತಾರೆ.

‘ಕೊರೊನಾ ಎರಡನೇ ಅಲೆಯಲ್ಲಿ 25ರಿಂದ 35 ವರ್ಷದ ಯುವಕರು ಹೆಚ್ಚು ಸಾವನ್ನಪ್ಪುತ್ತಿದ್ದಾರೆ. ಸೋಂಕು ತಗುಲಿದ ಆರಂಭದಲ್ಲೇ ಜನರು ಆಸ್ಪತ್ರೆಗೆ ಬಂದರೆ ಯಾವುದೇ ತೊಂದರೆಯಾಗುವುದಿಲ್ಲ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT