ಭಾನುವಾರ, ಅಕ್ಟೋಬರ್ 24, 2021
20 °C

ಭದ್ರಾವತಿ: ಕಡಜ ಕಚ್ಚಿ ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರಾವತಿ: ಸಮೀಪದ ಕಾಗದನಗರ ಆನೆಕೊಪ್ಪದ ಅಡಿಕೆ ತೋಟದಲ್ಲಿ ಅಡಿಕೆ ಗೊನೆ ಕೀಳುತ್ತಿದ್ದಾಗ ಕಡಜ (ಕಣಜ) ಹುಳುಗಳು ಕಚ್ಚಿ ತೋಟದ ಮಾಲೀಕ ಹಾಗೂ ಕಾರ್ಮಿಕ ಶನಿವಾರ ಮೃತಪಟ್ಟಿದ್ದಾರೆ.

ತೋಟದ ಮಾಲೀಕ ಸಿ.ಎನ್.ನಂಜಪ್ಪ (48) ಹಾಗೂ ಕಾರ್ಮಿಕ ಸಿದ್ಲಿಪುರದ ಮಲ್ಲಿಕಾರ್ಜುನ (52) ಮೃತಪಟ್ಟವರು.

ಶುಕ್ರವಾರ ಸಂಜೆ ಅಡಿಕೆ ತೋಟದಲ್ಲಿ ಮಲ್ಲಿಕಾರ್ಜುನ ಅವರು ಅಡಿಕೆ ಗೊನೆ ಕೀಳುತ್ತಿದ್ದಾಗ ಕಡಜದ ಗೂಡಿಗೆ ಆಕಸ್ಮಿಕವಾಗಿ ಹಾನಿ ಮಾಡಿದ್ದರಿಂದ ಒಮ್ಮೆಲೇ ಕಡಜಗಳು ಗುಂಪಾಗಿ ದಾಳಿ ನಡೆಸಿದ್ದವು. ಅವರು ಕೆಳಗೆ ಬಿದ್ದರು. ಸಮೀಪದಲ್ಲಿದ್ದ ತೋಟದ ಮಾಲೀಕ ನಂಜಪ್ಪ ಅವರ ಮೇಲೂ ಕಡಜಗಳು ದಾಳಿ ನಡೆಸಿದವು. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಗದನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.