ಶುಕ್ರವಾರ, ಡಿಸೆಂಬರ್ 3, 2021
20 °C

ದಸರಾ ಆನೆಗಳಿಗೆ ಪಾಲಿಕೆ ಅಗೌರವ: ಆರೋ‍ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಆನೆಗಳಿಗೆ ಮಹಾನಗರ ಪಾಲಿಕೆ ಆಡಳಿತ ಆಗೌರವ ತೋರಿದೆ ಎಂಬ ಆರೋಪಗಳು ಕೇಳಿಬಂದಿದೆ.

ಪ್ರತಿ ವರ್ಷ ದಸರಾದಲ್ಲಿ ಭಾಗವಹಿಸಿದ್ದ ಆನೆಗಳನ್ನು ವಾಹನದಲ್ಲಿ ಕರೆತಂದು ದಸರಾ ಮುಗಿದ ನಂತರ ವಾಹನದಲ್ಲೇ ಸಕ್ರೆಬೈಲಿಗೆ ಕರೆತರಲಾಗುತ್ತಿತ್ತು. ಆದರೆ, ಈ ಬಾರಿ ದಸರಾದಲ್ಲಿ ಭಾಗವಹಿಸಿದ್ದ ಸಾಗರ ಹಾಗೂ ಭಾನುಮತಿ ಆನೆಗಳನ್ನು ಸಕ್ರೆಬೈಲಿನಿಂದ ನಡೆಸಿಕೊಂಡು ಶಿವಮೊಗ್ಗಕ್ಕೆ ಕರೆತರಲಾಗಿದೆ. ಹೋಗುವಾಗಲೂ ನಡೆಸಿಕೊಂಡು ಹೋಗಿದ್ದಾರೆ. ಇದಕ್ಕೆ ಪರಿಸರವಾದಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಸರಾ ಮೆರವಣಿಗೆಯಲ್ಲಿ ಇವರೆಡೂ ಆನೆಗಳು ಸ್ವಲ್ಪ ದೂರ ಹೆಜ್ಜೆ ಹಾಕಿದ್ದವು. ಬಳಿಕ ಹಿಂತಿರುಗಿದ್ದವು. ಆ ದಿನ ಮಧ್ಯಾಹ್ನವೇ ಆನೆಗಳು ಬಿಡಾರಕ್ಕೆ ಮರಳಿವೆ. ಶಿವಮೊಗ್ಗದಿಂದ ಸಕ್ರೆಬೈಲು ಬಿಡಾರದವರೆಗೂ ಆನೆಗಳು ನಡೆದುಕೊಂಡೇ ಹೋಗಿವೆ. ದಸರಾ ಕಾರಣ ಆನೆಗಳಿಗೆ ಹಚ್ಚಲಾಗಿದ್ದ ಬಣ್ಣ ಕೂಡ ಹಾಗೆಯೇ ಇತ್ತು. ಆನೆಗಳು ನಡೆದು ಹೋಗುತ್ತಿರುವ ದೃಶ್ಯವನ್ನು ಪರಿಸರವಾದಿ ನಿತಿನ್‌ ಹೆರಳೆ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿ ಬಾರಿ ಶಿವಮೊಗ್ಗ ದಸರಾದ ಅಂಬಾರಿ ಹೊರಲು ಸಕ್ರೆಬೈಲು ಬಿಡಾರದಿಂದ ಆನೆಗಳನ್ನು ಕರೆಸಲಾಗುತ್ತದೆ. ಜಂಬೂಸವಾರಿ ಮರುದಿನ ಮಾವುತ, ಕಾವಾಡಿ, ಬಿಡಾರದ ಅಧಿಕಾರಿಗಳಿಗೆ ಗೌರವ ಸಲ್ಲಿಸಿ, ಆನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಗುತಿತ್ತು. ಆದರೆ ಈ ಬಾರಿ ಅಂತಹ ಪರಿಪಾಠವಿಲ್ಲದಂತಾಗಿದೆ ಎಂದು ಪಾಲಿಕೆ ಕಾಂಗ್ರೆಸ್‌ ಸದಸ್ಯ ಬಿ.ಎ. ರಮೇಶ ಹೆಗ್ಡೆ ದೂರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು