ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯಿಂದ ಕೀಳುಮಟ್ಟದ ರಾಜಕಾರಣ: 'ಮಾಂಗಲ್ಯ' ಹೇಳಿಕೆಗೆ ಮಧು ಬಂಗಾರಪ್ಪ ಟೀಕೆ

ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಟೀಕೆ
Published 23 ಏಪ್ರಿಲ್ 2024, 10:31 IST
Last Updated 23 ಏಪ್ರಿಲ್ 2024, 10:31 IST
ಅಕ್ಷರ ಗಾತ್ರ

ಶಿವಮೊಗ್ಗ: 'ಪತ್ನಿಯ ಬಗ್ಗೆ ಗೌರವ ಭಾವನೆ ಹೊಂದಿರದ ಪ್ರಧಾನಿ ನರೇಂದ್ರ ಮೋದಿ ಮಾಂಗಲ್ಯದ ಬಗ್ಗೆ ಮಾತನಾಡುತ್ತಾರೆ' ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಟೀಕಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಚುನಾವಣೆಗೋಸ್ಕರ ಶ್ರೀರಾಮನನ್ನು ಬೀದಿಗೆ ತಂದಿದ್ದ ಬಿಜೆಪಿಯವರು ಈಗ ಹಿಂದೂಗಳ ಪವಿತ್ರ ಭಾವದ ತಾಳಿಯನ್ನು ಕೀಳುಮಟ್ಟದ ರಾಜಕಾರಣಕ್ಕೆ ಬಳಸುತ್ತಿದ್ದಾರೆ. ಕೋಮುಗಳ ನಡುವೆ ದ್ವೇಷ ಭಾವನೆ ಮೂಡಿಸಿ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ.

ಮಾತಿಗೊಮ್ಮೆ ಭಾರತಾಂಬೆ ಎಂದು ಹೇಳುವ ಬಿಜೆಪಿ ನಾಯಕರು ನರೇಂದ್ರ ಮೋದಿ ಅವರ ಮಾಂಗಲ್ಯ ಹೇಳಿಕೆಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಮೋದಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಡಮ್ಮಿ ಎಂಬ ಕೆ.ಎಸ್.ಈಶ್ವರಪ್ಪ ಟೀಕೆಗೆ ಕಿಡಿಕಾರಿದ ಮಧು ಬಂಗಾರಪ್ಪ, 'ಈಶ್ವರಪ್ಪನವರಿಗೆ ತಮ್ಮ ಮಗನಿಗೆ ಟಿಕೆಟ್ ತೆಗೆದುಕೊಳ್ಳಲು ಆಗಲಿಲ್ಲ. ಪುತ್ರ ವ್ಯಾಮೋಹಕ್ಕೆ ಸಿಲುಕಿ ತಾಯಿರಾಜಕೀಯದ ಸಮಾನವಾದ ಪಕ್ಷವನ್ನು ಬೀದಿಯಲ್ಲಿ ಹರಾಜು ಹಾಕುತ್ತಿದ್ದಾರೆ. ರಾಜಕೀಯ ಮಾಡುವ ಯೋಗ್ಯತೆ ಅವರಿಗೆ ಇಲ್ಲ. ಅವರಿಗೆ ಮಾನ ಮರ್ಯಾದೆ ಇಲ್ಲ. ನಾಲಿಗೆಗೆ ಬಣ್ಣ ಬಳಿದುಕೊಂಡು ಮಾತಾಡುತ್ತಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ನಿಮ್ಮ (ಈಶ್ವರಪ್ಪ) ಹೊಲಸನ್ನು ತಂದು ನಮ್ಮ ಕಾಂಗ್ರೆಸ್ ಮೇಲೆ ಎರಚಬೇಡಿ. ಸಹೋದರಿ ಗೀತಾ ಶಿವರಾಜ ಕುಮಾರ್ ಅವರ ತಂಟೆಗೆ ಬರಬೇಡಿ' ಎಂದು ಎಚ್ಚರಿಸಿದರು.

'ನಿಮ್ಮ ಮುಖಕ್ಕೆ ಎಷ್ಟು ಮತ ಬೀಳುತ್ತವೆ. ಕಾದು ನೋಡಿ' ಎಂದು ಈಶ್ವರಪ್ಪ ವಿರುದ್ಧ ಕಿಡಿಕಾರಿದ ಮಧು ಬಂಗಾರಪ್ಪ, 'ಚುನಾವಣೆ ಫಲಿತಾಂಶ ಬರುತ್ತದೆ. ರಾಘವೇಂದ್ರ ಮತ್ತು ಈಶ್ವರಪ್ಪ ಇಬ್ಬರನ್ನೂ ಗೀತಕ್ಕ ಸೋಲಿಸುತ್ತಾರೆ' ಎಂದು ಭವಿಷ್ಯ ನುಡಿದರು.

'ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಕ್ರಮ ಸಂಖ್ಯೆ 1 ಬಂದಿದೆ. ಗೀತಾ ಅವರ ಪರ ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇದೆ. ಪತಿ ಶಿವರಾಜಕುಮಾರ್ ಜೊತೆ ಸೇರಿ ಇಲ್ಲಿಯವರೆಗೆ ಅವರು 3.5 ಲಕ್ಷ ಜನರನ್ನು ಭೇಟಿಯಾಗಿದ್ದಾರೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT