ಶಿವಮೊಗ್ಗ: ನಗರದಲ್ಲಿ ‘ಈದ್ ಮಿಲಾದ್’ ಆಚರಣೆ ಸೆ.15 ರಂದು ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮಧ್ಯಾಹ್ನ 2.30ಕ್ಕೆ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯು ನಗರದ ಗಾಂಧಿ ಬಜಾರ್ ಸುನ್ನಿ ಜಾಮಿಯಾ ಮಸೀದಿಯಿಂದ ಪ್ರಾರಂಭಗೊಂಡು ನಾಗಪ್ಪಕೇರಿ, ಲಷ್ಕರ್ ಮೊಹಲ್ಲಾ, ಬಾರ್ಲೈನ್ ರಸ್ತೆ, ಪೆನ್ನನ್ ಮೊಹಲ್ಲಾ, ಬಿ.ಹೆಚ್.ರಸ್ತೆ, ಮೀನಾಕ್ಷಿ ಭವನದ ಪಕ್ಕದ ರಸ್ತೆ, ಬಾಪೂಜಿ ನಗರ, ಟ್ಯಾಂಕ್ ಮೊಹಲ್ಲಾ, ಬಾಲರಾಜ್ ಅರಸ್ ರಸ್ತೆ, ಮಹಾವೀರ ವೃತ್ತ, ಗೋಪಿ ಸರ್ಕಲ್, ಅಮೀರ್ ಅಹ್ಮದ್ ಸರ್ಕಲ್, ಬಿ.ಹೆಚ್.ರಸ್ತೆ, ಬಸ್ ಸ್ಟ್ಯಾಂಡ್, ಎನ್.ಟಿ.ರಸ್ತೆಯಿಂದ ಹಾದು ಎನ್.ಟಿ.ರಸ್ತೆಯ 4ನೇ ತಿರುವು ಮಾರ್ಗವಾಗಿ ಆಜಾದ್ ನಗರ, ನೂರಾನಿ ಮಸೀದಿ, ಕೆ.ಆರ್.ಪುರಂ ರಸ್ತೆಯಿಂದ ಹಾದು ಆಮೀರ್ ಅಹ್ಮದ್ ಸರ್ಕಲ್, ಅಷೂರ್ ಖಾನಾಕ್ಕೆ ಬಂದು ಮೆರವಣಿಗೆ ಮುಕ್ತಾಯ ಆಗುತ್ತದೆ.

ಅದೇ ದಿನ ರಾತ್ರಿ 8 ಗಂಟೆಯಿಂದ 9 ಗಂಟೆವರೆಗೆ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಗರದ ಅಮೀರ್ ಅಹ್ಮದ್ ಸರ್ಕಲ್ ಅಷೂರ್ ಖಾನಾ ಮುಂಭಾಗದಲ್ಲಿ ನಡೆಯಲಿದೆ. ರಾತ್ರಿ 9 ಗಂಟೆಯಿಂದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದು ಮರ್ಕಜ್ಜಿ ಸುನ್ನಿ ಜಿಮೈತುಲ್ ಉಲ್ಮಿ ಕಮಿಟಿ ಕಾರ್ಯದರ್ಶಿ ಎಜಾಜ್ ಪಾಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರದಲ್ಲಿ ಬಂದೋಬಸ್ತ್:

ಈದ್ ಮಿಲಾದ್ ಮೆರವಣಿಗೆಗೆ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಎಸ್ಪಿ 1 ಎಎಸ್ಪಿ 3 ಡಿವೈಎಸ್ಪಿ 17 ಸಿಪಿಐ 52 ಪಿಎಸ್ಐ 38 ಎಎಸ್ಐ 77 ಹೆಡ್ ಕಾನ್ಸ್ಟೆಬಲ್ ಮತ್ತು ಕಾನ್ಸ್ಟೆಬಲ್ಗಳು 2000 ಗೃಹರಕ್ಷಕ ದಳ ಸಿಬ್ಬಂದಿ 1000 ಆರ್ಫ್ ತುಕಡಿ 01 ಎಸ್ಎಎಫ್ ತುಕಡಿ 1 ಡಿಎಆರ್ ತುಕಡಿ 8 ಕ್ಯೂಆರ್ಟಿ ತುಕಡಿ 1 ಮತ್ತು 10 ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.