ಶಿವಮೊಗ್ಗ: ಹಕ್ಕಿಜ್ವರ ಭೀತಿ ನಡುವೆ ತ್ಯಾವರಕೊಪ್ಪದಲ್ಲಿರುವ ಸಿಂಹಧಾಮದಲ್ಲಿ ಎಮು ಪಕ್ಷಿ ಭಾನುವಾರ ಮೃತಪಟ್ಟಿದ್ದು, ಅಂಗಾಗ ಮತ್ತು ರಕ್ತದ ಮಾದರಿಗಳನ್ನು ಬೆಂಗಳೂರು ಹಾಗೂ ಭೂಪಾಲ್ನ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

‘ಇದರ ಸಾವಿಗೆ ಪರಸ್ಪರ ಕಿತ್ತಾಟವೇ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಸಫಾರಿಯಲ್ಲಿ 6 ಎಮುಗಳಿದ್ದವು. ಪಶುಸಂಗೋಪನೆ ಇಲಾಖೆ ವೈದ್ಯರು ಮೃತಪಕ್ಷಿಯ ಪರೀಕ್ಷೆ ನಡೆಸಿದ್ದಾರೆ. ಪಕ್ಷಿ ಜ್ವರದ ಭೀತಿ ಇರುವ ಕಾರಣ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಸಫಾರಿಯ ನಿರ್ದೇಶಕ ಮುಕುಂದ್ಚಂದ್ ತಿಳಿಸಿದರು.

‘ಒಂದೂವರೆ ವರ್ಷದ ಹಿಂದೆಯೂ ಒಂದು ಎಮು ಪಕ್ಷಿ ಸಾವು ಕಂಡಿತ್ತು. ಹಕ್ಕಿಜ್ವರದ ಘೋಷಣೆ ನಂತರದ ರೋಗಾಣುಗಳನ್ನು ನಿಯಂತ್ರಿಸುವ ಔಷಧಗಳನ್ನ ಸಫಾರಿಯಲ್ಲೂ ಸಿಂಪಡಿಸಲಾಗಿದೆ. ಸಿಬ್ಬಂದಿಗೆ ಹಕ್ಕಿಜ್ವರ ಮುಂಜಾಗ್ರತೆ ಕುರಿತು ಮಾಹಿತಿ ನೀಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.