ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಇಂದು ರೈತರ ಮಹಾ ಪಂಚಾಯತ್

Last Updated 19 ಮಾರ್ಚ್ 2021, 20:48 IST
ಅಕ್ಷರ ಗಾತ್ರ

ಶಿವಮೊಗ್ಗ: ಶಿವಮೊಗ್ಗದಲ್ಲಿ ಮಾರ್ಚ್‌ 20ರಂದು ಮಧ್ಯಾಹ್ನ 3ಕ್ಕೆ ರೈತರ ಮಹಾ ಪಂಚಾಯತ್‌ ಆರಂಭವಾಗಲಿದೆ. ಬಿಸಿಲಿನ ಬೇಗೆಯಲ್ಲಿ ಬರುವ ರೈತರಿಗೆ ದಾಹ ತಣಿಸಲು ನೀರು, ಮಜ್ಜಿಗೆ, ಕಲ್ಲಂಗಡಿ, ನೆರಳಿನ ವ್ಯವಸ್ಥೆ ಮಾಡಲಾಗಿದೆ. ಏಕಕಾಲಕ್ಕೆ 25 ಸಾವಿರ ಜನರು ಕುಳಿತುಕೊಳ್ಳಲು ಅವಕಾಶ ಒದಗಿಸಲಾಗಿದೆ.

‘ಪ್ರತಿಯೊಬ್ಬರೂ ರೈತ ಹೋರಾಟದ ದೀಕ್ಷೆ ತೊಟ್ಟಿದ್ದೇವೆ’ ಎಂದು ಘೋಷಿಸಿರುವ ಜಿಲ್ಲೆಯ ರೈತ ಮುಖಂಡರು, ತಾವು ಒಗ್ಗೂಡುವ ಜತೆಗೆ ಬಿಜೆಪಿಯೇತರ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳ ಮುಖಂಡರನ್ನೂ ವೇದಿಕೆಗೆ ಸೆಳೆಯುವಲ್ಲಿ ಯಶ ಕಂಡಿದ್ದಾರೆ. ಅದಕ್ಕಾಗಿ ಸತತ ತಿಂಗಳಿನಿಂದ ಹಳ್ಳಿ ಹಳ್ಳಿ ತಿರುಗಿ ಜನರಲ್ಲಿ ಕ್ರಾಂತಿಯ ಬೀಜ ಬಿತ್ತಿದ್ದಾರೆ.

ರೈತ ನಾಯಕರ ದಂಡು: ಸಂಯುಕ್ತ ಕಿಸಾನ್ ಮೊರ್ಚಾದ ನಾಯಕರಾದ ದರ್ಶನ್‌ ಪಾಲ್, ರಾಕೇಶ್ ಟಿಕಾಯತ್‌, ಯದುವೀರ್‌ ಸಿಂಗ್, ರಾಜ್ಯ ಸಂಘದ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ ಮತ್ತಿತರರು ಭಾಗವಹಿಸುತ್ತಿದ್ದಾರೆ. ಬೆಂಗಳೂರಿನ ಮೌರ್ಯ ವೃತ್ತದಿಂದ ಬೆಳಿಗ್ಗೆ 7ಕ್ಕೆ ಹೊರಟು ತುಮಕೂರು, ತಿಪಟೂರು, ಅರಸೀಕೆರೆ, ಭದ್ರಾವತಿ ಮಾರ್ಗವಾಗಿ ಮಧ್ಯಾಹ್ನ 1.30ಕ್ಕೆ ಶಿವಮೊಗ್ಗ ತಲುಪಲಿದ್ದಾರೆ.

ಮೆರವಣಿಗೆ ರದ್ದು: ಕೋವಿಡ್‌ ಮಾರ್ಗಸೂಚಿ, ಬಿಸಿಲಿನ ತಾಪದ ಕಾರಣ ಮೆರವಣಿಗೆ ರದ್ದು ಮಾಡಲಾಗಿದೆ. ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ ಎಂದು ಸಂಘಟಕರಾದ ಕೆ.ಟಿ.ಗಂಗಾಧರ್, ಎಚ್‌.ಆರ್.ಬಸವರಾಜಪ್ಪ, ಕೆ.ಪಿ.ಶ್ರೀಪಾಲ್, ಕೆ.ಎಲ್.ಅಶೋಕ್, ಎಂ.ಗುರುಮೂರ್ತಿ, ಎನ್.ರಮೇಶ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT