ಭಾನುವಾರ, ಏಪ್ರಿಲ್ 2, 2023
31 °C

ಸರಗಳ್ಳತನ: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೊರಬ: ತಾಲ್ಲೂಕಿನ ಛತ್ರದಹಳ್ಳಿ ಗ್ರಾಮದ ರಮೇಶ ಎಂಬುವರ ಮನೆಯಲ್ಲಿ ಬಂಗಾರ ಕಳವು ಮಾಡಿದ್ದ ಆರೋಪಿ ಚಂದ್ರಪ್ಪ ಅವರನ್ನು ಪಿಎಸ್‌ಐ ಪ್ರಶಾಂತಕುಮಾರ್ ನೇತೃತ್ವದಲ್ಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಆರೋಪಿ ಸೆರೆಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸರು ಆರೋಪಿಯಿಂದ ₹ 96 ಸಾವಿರ ಮೌಲ್ಯದ 25 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಜೂನ್ 29ರಂದು ಛತ್ರದಹಳ್ಳಿ ಗ್ರಾಮದ ಆರೋಪಿ ಚಂದ್ರಪ್ಪ ಅದೇ ಗ್ರಾಮದ ರಮೇಶ ಎಂಬುವರ ಮನೆಯಲ್ಲಿ ಉಂಗುರ, ಕಿವಿ ಆಭರಣ ಹಾಗೂ ಸರ ಸೇರಿ ಒಟ್ಟು 25 ಗ್ರಾಂ ಚಿನ್ನವನ್ನು ಕಳವು ಮಾಡಿದ್ದ.

ಪಿಎಸ್‌ಐ ಪ್ರಶಾಂತಕುಮಾರ್, ಅಪರಾಧ ವಿಭಾಗದ ಸಲ್ಮಾನ್ ಖಾನ್ ಹಾಜಿ, ಸಿದ್ದನಗೌಡ, ಶಶಿಧರ, ಜಗದೀಶ್, ಸಂದೀಪ, ಸುಧಾಕರ್, ಪರಮೇಶ್ವರ ನಾಯಕ್ ತಂಡ ಆರೋಪಿಯನ್ನು ಬಂಧಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು