ಶಿವಮೊಗ್ಗ: ಇಲ್ಲಿನ ಗುಂಡಪ್ಪಶೆಡ್ ಮಲ್ಲೇಶ್ವರ ನಗರ ಮತ್ತು ರಾಮರಾವ್ ಬಡಾವಣೆ ನಿವಾಸಿಗಳ ಸಂಘದಿಂದ ಜಂಟಿಯಾಗಿ ತಮ್ಮ 12ನೇ ವರ್ಷದ ಗಣೇಶ ಉತ್ಸವವನ್ನು ಅದ್ದೂರಿಯಾಗಿ ನಡೆಸಿಕೊಂಡು ಹೋಗುತ್ತಿರುವುದು ನಗರಕ್ಕೆ ಶೋಭೆ ತಂದಿದೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್.ಸಿ. ಯೋಗೀಶ್ ಹೇಳಿದರು.
ಗಣೇಶೋತ್ಸವ ಅಂಗವಾಗಿ ಇಲ್ಲಿನ ಗುಂಡಪ್ಪ ಶೆಡ್‌ನ ಉದ್ಯಾನವನದಲ್ಲಿ ಸೋಮವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದರು.
ಪರೋಪಕಾರಂ ತಂಡದಿಂದ ಮನೋರಂಜನೆ ಮತ್ತು ರೇಣುಕಪ್ಪ ತಂಡದಿಂದ ಕೃಷ್ಣ ಸಂಧಾನ ನಾಟಕ ನಿತ್ಯ ನಡೆಯುತ್ತಿದೆ. ಭಕ್ತಾಧಿಗಳ ಮನಸ್ಸಿಗೆ ಖುಷಿಯಾಗುತ್ತಿದೆ ಎಂದು ತಿಳಿಸಿದರು.
ಇಂಡಿಯನ್ ದಿವ್ಯಾಂಗ ಎಂಪವರ್‌ಮೆಂಟ್ ಅಸೋಸಿಯೇಶನ್ ಅಧ್ಯಕ್ಷ ಕೊಡಕ್ಕಲ್ ಶಿವಪ್ರಸಾದ್ ಅವರು ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದರು.
ಅಚ್ಯುತ್‌ರಾವ್, ಪ್ರಕಾಶ್ ಜೋಡಿಯಾಕ್, ಶಿವಾನಂದಪ್ಪ, ಮೋಹನಕುಮಾರ್ ಇದ್ದರು.