ಹುಂಚದಕಟ್ಟೆ (ಕೋಣಂದೂರು): ಇಲ್ಲಿನ ಗ್ರಾಮ ಪಂಚಾಯಿತಿಯ ಜನ ವಿರೋಧಿ ಆಡಳಿತ ಮತ್ತು ದೌರ್ಜನ್ಯವನ್ನು ಖಂಡಿಸಿ ಬೃಹತ್ ಪ್ರತಿಭಟನೆ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ನಡೆಯಿತು.

ತಾಲ್ಲೂಕಿನಲ್ಲಿ ಇರುವ ಗ್ರಾಮ ಪಂಚಾಯಿತಿಯ ದುರಾಡಳಿತ ಹಾಗೂ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ದುರಾಡಳಿತದ ವಿರುದ್ಧ ಪ್ರತಿಭಟಿಸುವುದು ಅನಿವಾರ್ಯ.ಪ್ರತಿ ಹತ್ತು ಗ್ರಾಮ ಪಂಚಾಯಿತಿಗಳನ್ನು ಒಗ್ಗೂಡಿಸಿ ಒಂದು ನಿಗದಿತ ಸ್ಥಳದಲ್ಲಿ ಪ್ರತಿಭಟನೆ ಮಾಡೋಣ. ಗ್ರಾಮ ಪಂಚಾಯಿತಿಯ ಆಡಳಿತದ ವಿರುದ್ದ ಪ್ರತಿಭಟಿಸಲು ಹೆದರುವ ಅಗತ್ಯ ಇಲ್ಲ ಎಂದು ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಹೇಳಿದರು.

ಹಲವು ವರ್ಷಗಳಿಂದ ಗ್ರಾಮ ಪಂಚಾಯಿತಿ ಆಡಳಿತ ನಡೆಸುತ್ತಿರುವ ಬಿಜೆಪಿ ಬೆಂಬಲಿತ ಸದಸ್ಯರು ತಮ್ಮ ಅಧಿಕಾರ ಬಲದಿಂದ ಹಾಗೂ ಶಾಸಕ ಆರಗ ಜ್ಞಾನೇಂದ್ರ ತಮ್ಮ ಹಿಂದಿದ್ದಾರೆ ಎಂಬ ದರ್ಪ ದಿಂದ ಅನ್ಯ ಪಕ್ಷದವರಿಗೆ ಕಿರುಕುಳ ನೀಡುತ್ತಿದ್ದಾರೆಂದು ಸಭೆಯಲ್ಲಿದ್ದವರು ಆರೋಪಿಸಿದರು. ವೃದ್ದೆ ಗುಲಾಬಿ ಇವರ ಸ್ವಾದೀನಾನುಭವದ ಜಾಗವನ್ನು ಬಲವಂತವಾಗಿ ಖುಲ್ಲಾ ಪಡಿಸಲು ಪ್ರಯತ್ನಿಸಿ ಬಡ ಕುಟುಂಬದ ಅನ್ಯಾಯ ಮಾಡಲಾಗಿದೆ. ಪಂಚಾಯಿತಿ ಉಪಾಧ್ಯಕ್ಷರು ಹತ್ತಾರು ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದು,ಇದಕ್ಕೆ ಶಾಸಕರು ಬೆಂಬಲವಾಗಿ ನಿಂತಿದ್ದಾರೆ .ಬಡವರ ಒತ್ತುವರಿಯನ್ನು ಖುಲ್ಲಾ ಮಾಡಿಸಲು ತಹಶೀಲ್ದಾರ ಮೇಲೆ ಪ್ರಭಾವ ಬೀರಲಾಗುತ್ತಿದೆ. ಗ್ರಾಮಪಂಚಾಯಿತಿಯಲ್ಲಿ ಕಳಪೆ ಕಾಮಗಾರಿಗಳು ನಡೆಯುತ್ತಿವೆ.ಪ್ರೌಢಶಾಲೆಗೆ ಮಂಜೂರಾದ ಜಾಗವನ್ನು ಪ್ರಭಾವಿಗಳು ಅತಿಕ್ರಮಣ ಮಾಡುತ್ತಿದ್ದಾರೆ. ಉದ್ಯೋಗ ಖಾತ್ರಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು,ಗುಲಾಬಿ ಶೆಟ್ಟಿ ಕುಟುಂಬದವರು ,ಮುಖಂಡರಾದ ವಿಶ್ವನಾಥ ಶೆಟ್ಟಿ, ಜಿ.ಎಸ್. ನಾರಾಯಣರಾವ್, ಬಂಡಿ ರಾಮಚಂದ್ರ, ಬಿ.ಜಿ.ಚಂದ್ರಮೌಳಿ, ಉಮೇಶ್ ನಿಟ್ಟೂರು,ಆದರ್ಶ ಹುಂಚದಕಟ್ಟೆ, ಶೈಲೇಶ್, ಹೊಸಕೊಪ್ಪ ಚೇತನ್ ,ವಿಜಯದೇವ, ಸಾರ್ವಜನಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.