ಹೊಸನಗರ: ಪಟ್ಟಣದ ನಗರದೇವತೆ ಮಾರಿಕಾಂಬ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಮಂಗಳವಾರದಿಂದ ಆರಂಭವಾಗಿತ್ತು, ಫೆಬ್ರುವರಿ 14ರವರೆಗೆ 9 ದಿನಗಳ ಕಾಲ ಮಾರಿಜಾತ್ರೆ ಸಂಭ್ರಮದಿಂದ ನಡೆಯಲಿದೆ.

ಮಂಗಳವಾರ ಬೆಳಿಗ್ಗೆ ಪಟ್ಟಣದ ಗಣಪತಿ ದೇವಸ್ಥಾನದಲ್ಲಿ ಮಾರಿಕಾಂಬ ಮೂರ್ತಿಗೆ ವಿಶೇಷ ಪೂಜೆ ನಡೆಯಿತು. ಸಾರ್ವಜನಿಕವಾಗಿ ಪೂಜೆ ನಡೆದ ನಂತರ ಮಾರಿಕಾಂಬ ದೇವಿಯನ್ನು ಇಲ್ಲಿನ ರಾಜ ಬೀದಿಯಲ್ಲಿ ಮೆರವಣಿಗೆ ಮೂಲಕ ತಾಯಿಯ ತವರುಮನೆಯಾದ ಹಳೇ ಸಾಗರ ರಸ್ತೆ ದುರ್ಗಾಂಬ ದೇವಸ್ಥಾನಕ್ಕೆ ಕರೆ ತರಲಾಯಿತು. ದೇವಸ್ಥಾನ ಎದುರಿನ ಮುಖ ಮಂಟಪದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಜಾತ್ರೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಮೆರವಣಿಗೆಯಲ್ಲಿ ನೂರಾರು ಭಕ್ತರು ಸೇರಿದ್ದರು. ಮನೆ ಮುಂದೆ ಚಿತ್ತಾಕರ್ಷಕ ರಂಗೋಲಿ ಬಿಡಿಸಿ ದೇವಿಯನ್ನು ಸ್ವಾಗತಿಸಲಾಯಿತು. ಜಾತ್ರಾ ಸಮಯದ ಮೊದಲ ದಿನ ತವರು ಮನೆಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಹಿಳೆಯರು ತಾಯಿಗೆ ಉಡಿ ತುಂಬಿ ಬಾಗಿನ ಅರ್ಪಿಸಿದರು. ಸುತ್ತಮುತ್ತಲ ಹಳ್ಳಿಗಳಿಂದ ಭಕ್ತರು ಬಂದು ಮಡಿಲು ತುಂಬಿದರು. ಹಣ್ಣು, ಕಾಯಿ, ಆರತಿ ತಂದ ಭಕ್ತರು ಸರತಿ ಸಾಲಿನಲ್ಲಿ ನಿಂತು ಪೂಜೆ ನೆರವೇರಿಸಿದರು.

ಮಂಗಳವಾರ ರಾತ್ರಿ ಮಾರಿಕಾಂಬ ದೇವಿಯನ್ನು ಮಾರಿಗುಡ್ಡದಲ್ಲಿರುವ ಗಂಡನ ಮನೆ ಗದ್ದಿಗೆಗೆ ಮೆರವಣಿಗೆ ಮೂಲಕ ಕೊಂಡೊಯ್ಯುವುದು ವಾಡಿಕೆ. ಅಲ್ಲಿ 8 ದಿನಗಳ ಕಾಲ ವಿಶೇಷ ಜಾತ್ರಾ ಮಹೋತ್ಸವ ನಡೆಯುತ್ತದೆ. ದಿನವೂ ಧಾರ್ಮಿಕ ಕಾರ್ಯಕ್ರಮ, ವಿವಿಧ ಸಾಂಸ್ಕೃತಿಕ, ಆಟೋಟ, ರಂಜನೆಯ ಕಾರ್ಯಕ್ರಮಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.