ಹೊಸನಗರ: ತಾಲ್ಲೂಕಿನ ನಗರ ಹೋಬಳಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಇಲ್ಲಿನ ಕೊಡಚಾದ್ರಿ ಗಿರಿಗೆ ತೆರಳುವ ಗೌರಿಕೆರೆ–ಕಟ್ಟಿನಹೊಳೆ ಮಾರ್ಗದ ಲೋಕೋಪಯೋಗಿ ರಸ್ತೆ ಪಕ್ಕದಲ್ಲಿ ಭೂಕುಸಿತ ಉಂಟಾಗಿದೆ.

ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗೋಡಿ ಗ್ರಾಮದ ಹಾಲ್ಮನೆಯ ರಸ್ತೆ ಮಳೆಯಿಂದಾಗಿ ಹಾನಿಗೊಂಡಿದೆ. ನಾಗೋಡಿ ಗ್ರಾಮದ ಹಾಲ್ಮನೆ ಸಿದ್ದನಾಯ್ಕರ ಮನೆಗೆ ಹೋಗುವ ರಸ್ತೆ ಕುಸಿದು ಹಾನಿಯಾಗಿದೆ. ಸಿದ್ದನಾಯ್ಕ ಅವರ ಮನೆಯಿಂದ ನೀಲಮ್ಮ ಪದ್ಮನಾಯ್ಕ ಅವರ ಮನೆಗೆ ಹೋಗುವ ರಸ್ತೆಯ ಪಕ್ಕದ ಮಣ್ಣು ಕುಸಿದಿದೆ.

ಗುರುಟೆಯಿಂದ ಸಂಪದ ಮನೆವರೆಗಿನ ರಸ್ತೆ ಮಳೆಯಿಂದಾಗಿ ಹಾನಿಯಾಗಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ ಶೆಟ್ಟಿ ಉಪಾಧ್ಯಕ್ಷೆ ವಿನೋದ ಗುರುಮೂರ್ತಿ, ಸದಸ್ಯ ಚಂದಯ್ಯ ಜೈನ್, ಪಿಡಿಒ ಪವನ್ ಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.