ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸನಗರ | ಗುಣಮಟ್ಟ ನಿರ್ವಹಣೆ: ಗ್ರಾಮೀಣ ಆಸ್ಪತ್ರೆಗೆ ಮನ್ನಣೆ

ಪುರಪ್ಪೆಮನೆ ಆಯುರ್ವೇದ ಆಸ್ಪತ್ರೆಗೆ ರಾಷ್ಟ್ರೀಯ ಪ್ರಶಸ್ತಿ; ವೈದ್ಯ ಡಾ. ಪತಾಂಜಲಿಗೆ ಸನ್ಮಾನ
Published 11 ಜುಲೈ 2024, 13:01 IST
Last Updated 11 ಜುಲೈ 2024, 13:01 IST
ಅಕ್ಷರ ಗಾತ್ರ

ಹೊಸನಗರ: ಕುಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಯೊಂದು ತನ್ನ ಗುಣಮಟ್ಟಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.

ತಾಲ್ಲೂಕಿನ ಪುರಪ್ಪೆಮನೆ ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಯು ‘ರಾಷ್ಟ್ರೀಯ ಗುಣಮಟ್ಟದ ಆಸ್ಪತ್ರೆ’ ಎಂಬ ಪ್ರಶಸ್ತಿಗೆ ಭಾಜನವಾದ ಹಿನ್ನಲೆಯಲ್ಲಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಪತಂಜಲಿ ಅವರಿಗೆ ಗ್ರಾಮಸ್ಥರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಡಾ. ಪತಂಜಲಿ ಅವರ ಸೇವೆ ಸ್ತುತ್ಯರ್ಹವಾಗಿದ್ದು, ಅವರ ಕನಸು ನನಸಾಗಿಸಲು ‘ಪಂಚಕರ್ಮ ಚಿಕಿತ್ಸೆ’ ನೂತನ ಘಟಕ ಆರಂಭಕ್ಕೆ ಅಗತ್ಯವಿರುವ ಅನುದಾನ ನೀಡುವ ಭರವಸೆ ನೀಡಿದರು.

ರಾಷ್ಟ್ರೀಯ ಪ್ರಶಸ್ತಿ ಅರಸಿ ಬರಲು ಡಾ. ಪತಂಜಲಿ ಅವರ ಸೇವಾ ಮನೋಭಾವ, ಶಿಸ್ತು, ಜನಪರ ಕಾಳಜಿಯೇ ಕಾರಣ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎ.ಎನ್. ಮೃತ್ಯುಂಜಯ ಶ್ಲಾಘಿಸಿದರು.

ಪುರಪ್ಪೆಮನೆ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಿ.ಎನ್. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿಗೌಡ, ಜಿಲ್ಲಾ ಅಯುಷ್ ಅಧಿಕಾರಿ ಡಾ. ಲಿಂಗರಾಜ್ ಹಿಂಡಸಗಟ್ಟಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಜಾತ ದಿನೇಶ್ ಇದ್ದರು. ಪೂರ್ಣಿಮಾ ಕಿರಣ್ ಸ್ವಾಗತಿದರು. ಶಿಕ್ಷಕ ಪ್ರಸನ್ನ ಕುಮಾರ್ ನಿರೂಪಿಸಿದರು. ಮುಖ್ಯ ಶಿಕ್ಷಕ ನಾಗರಾಜ್ ವಂದಿಸಿದರು.

Quote - ಗ್ರಾಮೀಣ ಭಾಗದ ಆಯುರ್ವೇದ ವೈದ್ಯರೊಬ್ಬರು ತಮ್ಮ ಸೇವೆಯ ಮೂಲಕ ಜನಪ್ರಿಯತೆ ಗಳಿಸಿರುವುದು ಅವರು ಸಾರ್ವಜನಿಕ ಸ್ವಾಸ್ಥ್ಯಕ್ಕೆ ನೀಡಿರುವ ಪ್ರಾಮುಖ್ಯತೆ ಕಾರಣ. ಪುರಾತನ ಆಯುರ್ವೇದ ವೈದ್ಯ ಪದ್ದತಿ ಜೀವತವಾಗಿರಲು ವೈದ್ಯರ ನಿಸ್ವಾರ್ಥ ಸೇವೆಯೇ ಕಾರಣ ಆರ್. ಎಂ. ಮಂಜುನಾಥಗೌಡ ಅಧ್ಯಕ್ಷರು ಮಲೆನಾಡು ಅಭಿವೃದ್ಧಿ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT