ಭದ್ರಾವತಿ: ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ (ಶೇ 77.02 ರಷ್ಟು) ಭದ್ರಾವತಿ ತಾಲ್ಲೂಕು ಜಿಲ್ಲಾ ಮಟ್ಟದಲ್ಲಿ ಆರನೇ ಸ್ಥಾನ ಪಡೆದಿದೆ. ಕಳೆದ ವರ್ಷ (ಶೇ 88.99ರಷ್ಟು ಫಲಿತಾಂಶಶ) ಕೊನೆಯ ಸ್ಥಾನ ಪಡೆದಿತ್ತು. ಈ ಬಾರಿ ಕೊಂಚಮಟ್ಟಿಗೆ ಸುಧಾರಣೆ ಕಂಡರೂ, ನಿರೀಕ್ಷಿತ ಸಾಧನೆ ಸಾಧ್ಯವಾಗಿಲ್ಲ.

‘ಫಲಿತಾಂಶ ಸುಧಾರಣೆ ಆಗದೇ ಇಲ್ಲಿನ ಶೈಕ್ಷಣಿಕ ವ್ಯವಸ್ಥೆ ಕಂಡು ಪಾಲಕರು ಅಸಮಾಧಾನ ಹೊಂದಿದ್ದಾರೆ. ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದು ತಾಲ್ಲೂಕಿನಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಆಗದಿರುವುದಕ್ಕೆ ಪ್ರಮುಖ ಕಾರಣ. ಇಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರ ಮಕ್ಕಳು ವಲಸೆ ಬಂದು ವ್ಯಾಸಂಗ ಮಾಡುತ್ತಿದ್ದಾರೆ. ಪಾಲಕರು ಬೇರೆ ಊರುಗಳಲ್ಲಿ ವಾಸವಾಗಿದ್ದು, ಮಕ್ಕಳು ಇಲ್ಲಿ ಇರುವುದರಿಂದ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುತ್ತಿಲ್ಲ. ಇದು ಕೂಡ ಫಲಿತಾಂಶ ಹಿನ್ನಡೆಗೆ ಕಾರಣಗಳಲ್ಲೊಂದು’ ಎಂದು ಬಿಇಒ ಎ.ಕೆ. ನಾಗೇಂದ್ರಪ್ಪ ಹೇಳಿದರು.

ಈ ಬಾರಿ ತಾಲ್ಲೂಕಿನಲ್ಲಿ ಒಟ್ಟು 4,038 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 928 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 112 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕ ಪಡೆದುಕೊಂಡಿದ್ದಾರೆ. ಮೇ 5 ರಂದು ತಾಲ್ಲೂಕಿನ ಎಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರನ್ನು ಸಭೆ ಕರೆಯಲಾಗಿದೆ. ಫಲಿತಾಂಶದ ಸುಧಾರಣೆ ವಿಷಯವಾಗಿ ಅವಲೋಕನ ನಡೆಸಲಾಗುವುದು’ ಎಂದು ಬಿಇಒ ತಿಳಿಸಿದರು.

‘ನಾನೊಬ್ಬ ಕೂಲಿಕಾರ. ನಮ್ಮ ಮಗ ಈ ಬಾರಿ 10ನೇ ತರಗತಿಗೆ ಕಾಲಿಡುತ್ತಿದ್ದು, ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾನೆ. ಆತನ ಶಿಕ್ಷಣದ್ದೇ ಚಿಂತೆಯಾಗಿದೆ’ ಎಂದು ಸ್ಥಳೀಯರಾದ ಲಕ್ಷ್ಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.