ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ ಉಪ ಚುನಾವಣೆ ಫಲಿತಾಂಶ ಪಕ್ಷದ ಮುಖಂಡರ ಸಾಂಘಿಕ ಪ್ರಯತ್ನದ ಫಲ: ಈಶ್ವರಪ್ಪ

Last Updated 17 ನವೆಂಬರ್ 2020, 10:02 IST
ಅಕ್ಷರ ಗಾತ್ರ

ಶಿವಮೊಗ್ಗ: ಶಿರಾ ಉಪ ಚುನಾವಣೆ ಫಲಿತಾಂಶ ಪಕ್ಷದ ಮುಖಂಡರ ಸಾಂಘಿಕ ಪ್ರಯತ್ನದ ಫಲ. ಕೆಲವು ಮಾಧ್ಯಮಗಳು ಒಬ್ಬರಿಗೆ ಅದರ ಶ್ರೇಯ ನೀಡುವ ಕೆಲಸ ಮಾಡುತ್ತಿವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ದೂರಿದರು.

ಬಿಜೆಪಿ ಸಂಘಟನೆಗೆ ಸದಾ ಒತ್ತು ನೀಡುತ್ತದೆ. ಅದರ ಫಲವಾಗಿಯೇ ಎಲ್ಲ ಚನಾವಣೆಗಳಲ್ಲೂ ಪಕ್ಷಕ್ಕೆ ಯಶಸ್ಸು ಸಿಗುತ್ತಿದೆ. ಮುಖಂಡರು, ಕಾರ್ಯಕರ್ತರ ಸಂಘಟಿತ ಪ್ರಯತ್ನಗಳೇ ವಿಜಯದ ಗುಟ್ಟು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

ದೇಶಾಭಿಮಾನಕ್ಕೆ ಹೆಸರಾದ ಆರ್‌ಎಸ್‌ಎಸ್ ಸಂಘಟನೆಯ ಅರಿವಿಲ್ಲದೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹಗುರವಾಗಿ ಮಾತನಾಡಿದ್ದಾರೆ. ಆರ್‌ಎಸ್‌ಎಸ್‌ ಎಂದೂ ಜಾತಿವಾದಿ ಸಂಘಟನೆಯಲ್ಲ. ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸುವ ಕಾರ್ಯಕರ್ತರನ್ನು ತಯಾರು ಮಾಡುವ ಸಂಘಟನೆ. ಅಲ್ಲಿ ಎಲ್ಲ ಜಾತಿಯ ಜನರೂ ಒಳಗೊಂಡಿದ್ದಾರೆ. ಈಗಿನ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಅವರೂ ಸಂಘಟನೆಯಲ್ಲೇ ಬೆಳೆದು ಬಂದವರು. ಅಂತಹ ಸಂಘಟನೆ ವಿರುದ್ಧ ಅವಹೇಳನ ಸಲ್ಲದು ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಮುಖಂಡರ ಮಕ್ಕಳೇ ಆರ್‌ಎಸ್‌ಎಸ್‌ಗೆ ಬರುತ್ತಿದ್ದಾರೆ. ಸಿದ್ದರಾಮಯ್ಯ, ಹರಿಪ್ರಸಾದ್ ವಿರುದ್ಧ ತಾವೂ ಹಗುರ ಪದಗಳನ್ನು ಬಳಸಬಹುದು. ಆದರೆ, ಅದೇ ಸಂಘಟನೆಯಿಂದ ಸಂಸ್ಕಾರ ಪಡೆದಿದ್ದೇನೆ. ಅವರ ರೀತಿ ಮಾತು ಆಡುವುದಿಲ್ಲ’ ಎಂದು ತಿರುಗೇಟು ನೀಡಿದರು.

ಕುರುಬ ಸಮಾಜ ಸೇರಿದಂತೆ ಸಮಾಜದ ಹಲವು ಜಾತಿಗಳಿಗೆ ಸೂಕ್ತ ಮೀಸಲಾತಿ ಸೌಲಭ್ಯ ದೊರಕಬೇಕಿದೆ. ಕುಲಶಾಸ್ತ್ರೀಯ ಅಧ್ಯಯನದ ಮೂಲಕ ಅರ್ಹತೆ ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT