ಕೋಣಂದೂರು: ದಶಕಗಳ ಹಿಂದೆ ಖುಷ್ಕಿ ಜಮೀನು ಮಾರಾಟ ದಂಧೆಯನ್ನು ತಪ್ಪಿಸುವ ಸಲುವಾಗಿ ನಡೆದ ಕೃಷಿ ಪ್ರಯೋಗಗಳಲ್ಲಿ ಗಣೇಶ್ ಮೂರ್ತಿ ಅವರು ನಡೆಸಿದ ಪ್ರಯೋಗ ಸ್ಮರಣೀಯವಾದುದು ಎಂದು ಪ್ರಗತಿಪರ ಕೃಷಿಕ ಕಡಿದಾಳ್ ದಯಾನಂದ್ ತಿಳಿಸಿದರು.

ಇಲ್ಲಿನ ರಾಷ್ಟ್ರೀಯ ವಸತಿಶಾಲೆಯಲ್ಲಿ ಬುಧವಾರ ನಡೆದ ‘ಗಣೇಶ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಖುಷ್ಕಿ ಜಮೀನುಗಳ ಮಾರಾಟ ದಂಧೆಯನ್ನು ತಡೆಗಟ್ಟಲು ಮಲೆನಾಡಿನ ಭಾಗಗಳಲ್ಲಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಕಾರ್ಯಾಗಾರ, ಕಾರ್ಯಕ್ರಮ ಮಾಡಲು ಗಣೇಶ್ ಮೂರ್ತಿ ಅವರು ವಿಶೇಷ ಆಸಕ್ತಿ ವಹಿಸಿದ್ದರು. ಶಿಸ್ತು ಬದ್ಧ ಜೀವನ, ಹೊಸದರ ಹುಡುಕಾಟ, ಆಳವಾದ ಅಧ್ಯಯನ, ದೂರ ದೃಷ್ಟಿ ವ್ಯಕ್ತಿತ್ವ ಅವರದು. ಕೃಷಿ, ಸಮಾಜ ಸೇವೆ, ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು ಕೋಣಂದೂರಿನಲ್ಲಿ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದಿದ್ದರು ಎಂದರು.

ದಿ.ಎಚ್.ಎಸ್.ಗಣೇಶ್ ಮೂರ್ತಿಯವರು ಕೇವಲ ವ್ಯಕ್ತಿಯಲ್ಲ, ಶಕ್ತಿಯಾಗಿದ್ದರು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿಯ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಅಜೀವ ಸದಸ್ಯರಾದ ಅನಂತಕೃಷ್ಣ, ಪಿ.ಸದಾನಂದ, ವತ್ಸಲಾ ಗಣೇಶ್ ಮೂರ್ತಿ, ಪ್ರಾಂಶುಪಾಲ ಕೆ.ಎಸ್.ವಾಸುದೇವ, ವಸತಿಶಾಲೆಯ ಬಿ.ಕೆ. ಪ್ರಫುಲ್ಲ, ಎಚ್.ವಿ. ಮುರಳೀಧರ, ಸುಜಾತ ಮಹಾಲೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.