ಯಾವುದೇ ಪ್ರದೇಶದಲ್ಲಿ ಅಹಿತಕರ ಘಟನೆಗಳು ಜರುಗಿದಾಗ, ಹೊರಗಿನವರು ಆ ಪ್ರದೇಶದ ಹೆಸರು ಕೇಳಿದರೆ ತಪ್ಪಾಗಿ ಗ್ರಹಿಸುತ್ತಾರೆ. ಇದರಿಂದ ಆ ಪ್ರದೇಶದ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಯಾರದ್ದೋ ಮಾತು ಕೇಳಿ, ಸತ್ಯಾಸತ್ಯತೆ ತಿಳಿಯದೇ ಆ ಕ್ಷಣದಲ್ಲಿ ಅತಿರೇಕದ ವರ್ತನೆ ತೋರುವುದರಿಂದ ಆ ಪ್ರದೇಶದ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮಕ್ಕೆ ಕಾರಣರಾಗುತ್ತೀರಿ. ಅದು ಸರಿಯಲ್ಲ ಎಂದು ಕಿವಿಮಾತು ಹೇಳಿದರು.