ಶಿವಮೊಗ್ಗ: ತೀವ್ರ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಜಿಲ್ಲೆಯ ಹಿರಿಯ ರಾಜಕಾರಣಿ ಕೆ.ಎಸ್.ಈಶ್ವರಪ್ಪ, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಸ್ಥಾನ ದೊರೆತಿದೆ. ಐದನೇ ಬಾರಿ ಸಚಿವರಾಗಿ ಈಶ್ವರಪ್ಪ, ಮೊದಲ ಬಾರಿ ಮಂತ್ರಿಯಾಗಿ ಆರಗ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕೆ.ಎಸ್.ಈಶ್ವರಪ್ಪ ಅವರು ಯಡಿಯೂರಪ್ಪ ಅವರ ಜತೆ ರಾಜ್ಯದ ಮೂಲೆಮೂಲೆ ಸುತ್ತಿ ಭಾರತೀಯ ಜನತಾ ಪಕ್ಷ ಕಟ್ಟಿದವರು. ಕುರುಬ ಸಮಾಜದ ಮುಖಂಡರಾದರೂ ಎಂದೂ ಜಾತಿ ಮೂಲಕ ಗುರುತಿಸಿಕೊಂಡವರಲ್ಲ. ಪಕ್ಷದ ಸಿದ್ಧಾಂತ ಬಿಟ್ಟು ಆಚೀಚೆ ಕದಲಿದವರಲ್ಲ. ಪಕ್ಷ ನಿಷ್ಠೆ, ನೇರಮಾತು, ಸಂಘಟನಾ ಚತುರತೆ, ನಿರಂತರ ಪರಿಶ್ರಮ ಅವರ ಶಕ್ತಿ.

ಈಶ್ವರಪ್ಪ ಅವರ ಪೋಷಕರು ಬಳ್ಳಾರಿ ಜಿಲ್ಲೆಯವರು. ಈಶ್ವರಪ್ಪ ಹುಟ್ಟಿದ (10, ಜುಲೈ 1948) ನಂತರ ಶಿವಮೊಗ್ಗಕ್ಕೆ ವಲಸೆ ಬಂದು ಇಲ್ಲೇ ನೆಲೆ ನಿಂತರು. ಬಿ.ಕಾಂ ಪದವೀಧರರರಾದ ಈಶ್ವರಪ್ಪ ಬಾಲ್ಯದಿಂದಲೇ ಹಿರಿಯ ಸಹೋದರ ಚಂದ್ರಪ್ಪ ಅವರ ಮಾರ್ಗದರ್ಶನದಲ್ಲಿ ಸಾಮಾಜ ಸೇವಾ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಸಹಪಾಠಿಗಳಾದ ಡಿ.ಎಂ.ರವೀಂದ್ರ, ನರಸಿಂಹಮೂರ್ತಿ ಅಯ್ಯಂಗಾರ್ ಅವರ ಮೂಲಕ ಆರ್ಎಸ್ಎಸ್ ಸಂಪರ್ಕಕ್ಕೆ ಬಂದರು. ಪದವಿ ನಂತರ ಎಬಿವಿಪಿ ಅಧ್ಯಕ್ಷರಾಗಿ, ಜನಸಂಘದ ಸದಸ್ಯರಾಗಿ ಕೆಲಸ ಮಾಡಿದ್ದಾರೆ.

ಸಂಘ ಪರಿವಾರದ ಕೆಲಸ ಮಾಡುತ್ತಲೇ ಶಿವಮೊಗ್ಗದಲ್ಲಿ ಉದ್ಯಮ ಆರಂಭಿಸಿದ ಅವರು ತುರ್ತು ಪರಿಸ್ಥಿತಿಯ ಸಮಯದಲ್ಲಿ (1975–77) ಜೈಲುವಾಸವನ್ನೂ ಅನುಭವಿಸಿದ್ದರು. 1982ರಲ್ಲಿ ನಗರ ಬಿಜೆಪಿ ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದ್ದರು. ಅವರ ಸಂಘಟನೆಯ ಫಲವಾಗಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿ ‘ಕಮಲ’ ಅರಳಿತ್ತು. ಎಂ.ಆನಂದರಾವ್ ಅವರು 1983ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. 1985ರಲ್ಲಿ ಕಾಂಗ್ರೆಸ್ನ ಕೆ.ಎಚ್. ಶ್ರೀನಿವಾಸ್ ಎದುರು ಸೋಲು ಕಂಡ ನಂತರ ಪಕ್ಷ ಈಶ್ವರಪ್ಪ ಅವರನ್ನು ಕಣಕ್ಕೆ ಇಳಿಸಿತ್ತು.

ಈಶ್ವರಪ್ಪ 1989ರಲ್ಲಿ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದ್ದರು. 1992ರಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕವಾಗಿದ್ದರು. 1994ರಲ್ಲಿ ಪುನರ್ ಆಯ್ಕೆಯಾದರು. 1999ರಲ್ಲಿ ಕಾಂಗ್ರೆಸ್ನ ಎಚ್.ಎಂ. ಚಂದ್ರಶೇಖರಪ್ಪ ಅವರ ಎದುರು ಮೊದಲ ಸೋಲು ಕಂಡರು. ಆಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ ಈಶ್ವರಪ್ಪ ಅವರನ್ನು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿತು. 2004ರಲ್ಲಿ ಮತ್ತೆ ಶಾಸಕರಾದ ಅವರಿಗೆ ಅದೃಷ್ಟ ಒಲಿದಿತ್ತು. 2006–07ರಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ–ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ ನೇಮಕವಾದರು. 2008ರಲ್ಲಿ ಯಡಿಯೂರಪ್ಪಸಂಪುಟದಲ್ಲಿಇಂಧನ ಸಚಿವರಾಗಿ, 2012ರಲ್ಲಿ ಜಗದೀಶ ಶೆಟ್ಟರ್ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಈ ಮಧ್ಯೆ 2010ರಲ್ಲಿ ಮತ್ತೊಮ್ಮೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

2013ರಲ್ಲಿ ಕಾಂಗ್ರೆಸ್ನ ಕೆ.ಬಿ. ಪ್ರಸನ್ನಕುಮಾರ್ ಎದುರು ಸೋಲು ಅನುಭವಿಸಿದ ನಂತರ ಪಕ್ಷ ಅವರನ್ನು ವಿಧಾನ ಪರಿಷತ್ಗೆ ಕಳುಹಿಸಿತು. ಆ ಸದನದ ವಿರೋಧ ಪಕ್ಷದ ನಾಯಕರಾಗಿಯೂಕೆಲಸ ಮಾಡಿದ ಅನುಭವ ಅವರಿಗಿದೆ.

ಬಿ.ಎಸ್.ಯಡಿಯೂರಪ್ಪ ಅವರು ಪಕ್ಷ ತೊರೆದು ಕೆಜೆಪಿ ಕಟ್ಟಿದಾಗ ಪಕ್ಷ ನಿಷ್ಠರಾಗೇ ಉಳಿದಿದ್ದರು. ಮತ್ತೆ ಬಿಎಸ್ವೈ ಪಕ್ಷಕ್ಕೆ ಮರಳಿದಾಗ ಸ್ವಾಗತಿಸಿದ್ದ ಅವರು, ನಂತರ ಏಕ ವ್ಯಕ್ತಿ ಹಿಡಿತ ವಿರೋಧಿಸಿದ್ದರು. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿ ಹಿಂದುಳಿದವರು, ದಲಿತರ ಸಂಘಟನೆಯಲ್ಲಿ ತೊಡಗಿದ್ದರು. ಇದು ಯಡಿಯೂರಪ್ಪ–ಈಶ್ವರಪ್ಪ ಅವರ ಮಧ್ಯೆ ಸಂಘರ್ಷಕ್ಕೆ ನಾಂದಿ ಹಾಡಿತ್ತು. ಕೊನೆಗೆ ಬಿಜೆಪಿ ಹೈಕಮಾಂಡ್ ಮಧ್ಯ ಪ್ರವೇಶದಿಂದ ಎಲ್ಲವೂ ಸುಖಾಂತ್ಯವಾಗಿತ್ತು. 2019ರ ಚುನಾವಣೆಯಲ್ಲಿ ಭಾರಿ ಅಂತರದ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದರು. 2019ರಲ್ಲಿ ಅಸ್ತಿತ್ವಕ್ಕೆ ಬಂದ ಯಡಿಯೂರಪ್ಪ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಖಾತೆ ನಿರ್ವಹಿಸಿದ್ದರು. ಈಗ ಮತ್ತೆ ಸಚಿವ ಸ್ಥಾನ ಒಲಿದು ಬಂದಿದೆ.

ಕೊನೆಗೂ ಒಲಿಯಿತು ಜ್ಞಾನೇಂದ್ರಗೆ ಮಂತ್ರಿ ಯೋಗ

ಜನಪರ ಹೋರಾಟದ ಮೂಲಕ ಗಮನಸೆಳೆದು, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಆರಗ ಜ್ಞಾನೇಂದ್ರ ಅವರಿಗೆ ಕೊನೆಗೂ ಮಂತ್ರಿಗಿರಿಯ ಯೋಗ ಒಲಿದು ಬಂದಿದೆ.

‘ಗುಡಿಸಲು ವಾಸ, ಗುಮ್ಮಿ ನೀರು ಕುಡಿದು ಬೆಳೆದವನು ನಾನು’ ಎಂದು ಹೇಳಿಕೊಳ್ಳುತ್ತಲೇ ಹೋರಾಟದ ಬದುಕು ಆರಿಸಿಕೊಂಡಿದ್ದ ಒಕ್ಕಲಿಗ ಸಮುದಾಯದ ಆರಗ ನಂತರ ಬಿಜೆಪಿಯಲ್ಲಿ ಭದ್ರ ನೆಲೆ ಕಂಡುಕೊಂಡಿದ್ದರು. ಯಡಿಯೂರಪ್ಪ ಬಿಜೆಪಿಯಿಂದ ಸಿಡಿದು ಕೆಜೆಪಿ ಕಟ್ಟಿದಾಗಲೂ ಅವರ ಜತೆ ಗುರುತಿಸಿಕೊಳ್ಳದೆ ಪಕ್ಷ ನಿಷ್ಠೆ ಮೆರೆದಿದ್ದರು.

ಆರಗ ಜ್ಞಾನೇಂದ್ರ ಅವರು 9 ವಿಧಾನಸಭಾ ಚುನಾವಣೆ ಎದುರಿಸಿದ್ದಾರೆ. ಐದು ಬಾರಿ ಸೋಲು ಕಂಡಿದ್ದಾರೆ. 1983ರಲ್ಲಿ ಜನತಾ ಪಕ್ಷ, ಕ್ರಾಂತಿರಂಗ ಅಭ್ಯರ್ಥಿ ಡಿ.ಬಿ.ಚಂದ್ರೇಗೌಡ, ಕಾಂಗ್ರೆಸ್ನ ಕಡಿದಾಳು ದಿವಾಕರ್ ಎದುರು ಪೈಪೋಟಿ ನಡೆಸಿದ್ದರು. 1985ರಲ್ಲಿ ಮತ್ತೊಮ್ಮೆ ಸ್ಪರ್ಧೆಗಿಳಿದ ಆರಗ ಅವರು ಕಾಂಗ್ರೆಸ್ನ ಪಟಮಕ್ಕಿ ರತ್ನಾಕರ ಅವರ ಎದುರು ಸೋಲು ಕಂಡಿದ್ದರು. 1989ರಲ್ಲಿ ಹ್ಯಾಟ್ರಿಕ್ ಸೋಲು ಕಂಡಿದ್ದರು.

1994ರ ಚುನಾವಣೆಯಲ್ಲಿ ಡಿ.ಬಿ.ಚಂದ್ರೇಗೌಡ ಅವರನ್ನು ಮೂರು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ, ಮೊದಲ ಗೆಲುವು ದಾಖಲಿಸಿದ್ದರು. ನಂತರ 1999, 2004ರ ಚುನಾವಣೆಯಲ್ಲಿ ನಿರಂತರ ಗೆಲ್ಲುವ ಮೂಲಕ ಗೆಲುವಿನ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. 2008, 2013ರಲ್ಲಿ ಕಾಂಗ್ರೆಸ್ನ ಕಿಮ್ಮನೆ ರತ್ನಾಕರ ವಿರುದ್ಧ ಸೋತು ರಾಜಕೀಯ ವನವಾಸ ಅನುಭವಿಸಿದ್ದರು. 2018 ಚುನಾವಣೆಯಲ್ಲಿ ಭಾರಿ ಅಂತರದ ಗೆಲುವಿನ ಮೂಲಕ ರಾಜಕೀಯ ಪ್ರಭಾವ ಹೆಚ್ಚಿಸಿಕೊಂಡಿದ್ದರು. ನಾಲ್ಕು ಬಾರಿ ಶಾಸಕರಾದರೂ ಎಪಿಎಂ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಈಗ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮೊದಲ ಬಾರಿ ತಮ್ಮ 70ನೇ ವಯಸ್ಸಿಗೆ ಮಂತ್ರಿಗಾದಿ ಅಲಂಕರಿಸಿದ್ದಾರೆ.

ಪಕ್ಷನಿಷ್ಠರಿಗೆ ಮಣೆ; ಯಡಿಯೂರಪ್ಪ ಬಣ ಕಡೆಗಣನೆ

ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಜಿಲ್ಲೆಯ ಇಬ್ಬರಿಗೆ ಸಚಿವ ಪದವಿ ದೊರೆತರೂ, ಯಡಿಯೂರಪ್ಪ ಬಣದ ಅಸಮಾಧಾನ ಕಡಿಮೆಯಾಗಿಲ್ಲ. ಹಿರಿಯರಾದ ಕೆ.ಎಸ್.ಈಶ್ವರಪ್ಪ ಹಾಗೂ ಆರಗ ಜ್ಞಾನೇಂದ್ರ ಪಕ್ಷನಿಷ್ಠರು. ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗಲೂ ಪಕ್ಷ ಬಿಟ್ಟು ಹೋಗಿರಲಿಲ್ಲ. ಈಗ ಇಬ್ಬರಿಗೂ ಸಚಿವ ಸ್ಥಾನ ದೊರೆತಿದೆ.

ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಅವರ ಬಣದಲ್ಲಿ ಗುರುತಿಸಿಕೊಂಡಿದ್ದ ಹರತಾಳು ಹಾಲಪ್ಪ, ಯಡಿಯೂರಪ್ಪ ಅವರಿಂದ ರಾಜಕೀಯ ಪುನರ್ಜನ್ಮ ಪಡೆದ ಸೊರಬ ಶಾಸಕ ಕುಮಾರ್ ಬಂಗಾರಪ್ಪ, ಸ್ವತಃ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ದೊರಕದೇ ಇರುವುದು ಅವರ ಅಭಿಮಾನಿಗಳಲ್ಲಿ ಬೇಸರ ತರಿಸಿದೆ.

‘ಮುಖ್ಯಮಂತ್ರಿ ಸ್ಥಾನ ಕಸಿದುಕೊಂಡರು. ಕೊನೆಯ ಪಕ್ಷ ಅವರ ಪುತ್ರ ವಿಜಯೇಂದ್ರ ಅವರಿಗೆ ಸ್ಥಾನ ದೊರಕಿಸಬಹುದಿತ್ತು. ಅವರನ್ನು ನಂಬಿದ್ದ ಶಾಸಕರಿಗೂ ಅವಕಾಶ ಸಿಗಲಿಲ್ಲ’ ಎಂದು ಯಡಿಯೂರಪ್ಪ ಅವರ ಆಪ್ತ ಮುಖಂಡರೊಬ್ಬರು ಬೇಸರ ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.