ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾ.ಡಿಸೋಜಾ ಸಾಹಿತ್ಯೋತ್ಸವ ಡಿ.31ಕ್ಕೆ

-
Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಕರ್ನಾಟಕ ಸಂಘ, ಶಿಕಾರಿಪುರದ ಜನಸ್ಪಂದನ ಟ್ರಸ್ಟ್ ಹಾಗೂ ಸುವ್ವೀ ಪ್ರಕಾಶನದ ಆಶ್ರಯದಲ್ಲಿ ಡಿ.ಪ್ರವೇಶ: ೩೧ರಂದುಸಾಹಿತಿ ನಾ.ಡಿಸೋಜಾ ಅವರ ಬದುಕು–ಬರಹ ಕುರಿತು ‘ಕನ್ನಡದ ನಾಡಿ ಸಾಹಿತ್ಯೋತ್ಸವ’ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 10.30ಕ್ಕೆ ಕರ್ನಾಟಕ ಸಂಘದ ಸಭಾ ಭವನದಲ್ಲಿ ನಡೆಯಲಿರುವ ಸಾಹಿತ್ಯೋತ್ಸವದ ಉದ್ಘಾಟನೆ ವೇಳೆ ನಾ.ಡಿಸೋಜಾ ಅವರ 44 ಕಾದಂಬರಿಗಳ 9 ಸಮಗ್ರ ಸಂಪುಟಗಳು ಹಾಗೂ ಅವರ ಕಥೆಯಾಧಾರಿತ ‘ಸೆಲ್ವಿಯಾ ಎಂಬ ಹುಡುಗಿ’ ಕಿರುಚಿತ್ರವನ್ನು ಸಾಹಿತಿ ಹಂಪಾ ನಾಗರಾಜಯ್ಯ ಬಿಡುಗಡೆ ಮಾಡುವರು. ಸಾಹಿತ್ಯೋತ್ಸವದಲ್ಲಿ ನಾ.ಡಿಸೋಜಾ ಬದುಕು–ಬರಹ ಕುರಿತ 6 ಗೋಷ್ಠಿಗಳು ನಡೆಯಲಿವೆ.

ಮಕ್ಕಳ ಸಾಹಿತಿ ಹಾಫೀಜ್ ಕರ್ನಾಟಕಿ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಂಜುನಾಥ್, ಹಿರಿಯ ಪತ್ರಕರ್ತ ಕೆ.ಎಸ್. ಹುಚ್ರಾಯಪ್ಪ, ಚಿತ್ರ ನಿರ್ದೇಶಕ ನವೀನ್ ಡಿಸೋಜಾ, ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್, ಸುವ್ವೀ ಪ್ರಕಾಶನದ ಡಿ.ಎನ್.ಸುನೀಲ್‌ಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT