ಶುಕ್ರವಾರ, ನವೆಂಬರ್ 27, 2020
18 °C

'ವಿಜಯದಶಮಿಯ ದಿನ ಪಚ್ಚೆಲಿಂಗ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ತಾಲ್ಲೂಕಿನ ಕೆಳದಿ ಬಂದಗದ್ದೆಯ ರಾಜಗುರು ಹಿರೇಮಠದಲ್ಲಿ ಈ ಬಾರಿ ವಿಜಯದಶಮಿಯ ದಿನ ಪಚ್ಚೆಲಿಂಗ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಬ್ಯಾಂಕ್ ಲಾಕರ್‌ನಲ್ಲಿ ಪಚ್ಚೆಲಿಂಗ ಇಟ್ಟಿದ್ದ ಕಾರಣ 22 ವರ್ಷಗಳಿಂದ ದರ್ಶನಕ್ಕೆ ಅವಕಾಶ ಇರಲಿಲ್ಲ. 1996-97ರಿಂದ ನವರಾತ್ರಿ ಸಮಯದಲ್ಲಿ ದೊರೆಯುತ್ತಿದ್ದ ಅಪರೂಪದ ಪಚ್ಚೆಲಿಂಗ ದರ್ಶನವೂ ನಿಂತು ಹೋಗಿತ್ತು. ಕಳೆದ ವರ್ಷ ವಿಜಯದಶಮಿ ದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಚ್.ಹಾಲಪ್ಪ ಹರತಾಳು ಅವರ ಸಹಕಾರದಿಂದ ಪಚ್ಚೆಲಿಂಗವನ್ನು ಮಠಕ್ಕೆ ತರಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಬಾರಿ ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವ ದೃಷ್ಟಿಯಿಂದ ದರ್ಶನಕ್ಕೆ ವ್ಯವಸ್ಥೆ ಮಾಡಿಲ್ಲ ಎಂದು ಅವರು ಪ್ರಕಟಣೆ ನೀಡಿದ್ದಾರೆ.

ಈ ಲಿಂಗಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆ. ಬಂದಗದ್ದೆ ಹಿರೇಮಠ ಕೆಳದಿ ಸಾಮ್ರಾಜ್ಯದ ರಾಜಗುರುಗಳ ಆಶ್ರಮ. ರಾಣಿ ಚೆನ್ನಮ್ಮಾಜಿ ಸೇರಿ ಕೆಳದಿ ಅರಸರ ರಾಜಗುರುಗಳು ಈ ಮಠಕ್ಕೆ ಸೇರಿದವರು. ಅಪರೂಪದ ಪಚ್ಚೆ ಲಿಂಗವನ್ನು ಕೆಳದಿ ಅರಸರು ಮಠಕ್ಕೆ ನೀಡಿದ್ದರು. ಅಂದಿನಿಂದ ಪ್ರತಿ ವರ್ಷದ ನವರಾತ್ರಿಯೂ ಸೇರಿ ವಿಶೇಷ ಸಮಯದಲ್ಲಿ ಅದಕ್ಕೆ ಪೂಜೆ ಸಲ್ಲಿಸಲಾಗುತ್ತಿತ್ತು. ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು