ಶಿವಮೊಗ್ಗ: ವಾರಂಟಿ ಅವಧಿ ಇದ್ದರೂ ಸ್ಕೂಟರ್ ರಿಪೇರಿ ಮಾಡಿಕೊಡದೇ ಸೇವಾ ನ್ಯೂನ್ಯತೆ ಎಸಗಿದ ಕಾರಣ ದೂರುದಾರನಿಗೆ ₹67,348 ಪರಿಹಾರ ಹಾಗೂ ನ್ಯಾಯ ಪ್ರಕ್ರಿಯೆಯ ಖರ್ಚು–ವೆಚ್ಚ ಮತ್ತು ಮಾನಸಿಕ ವೇದನೆಗಾಗಿ ₹40,000 ಪಾವತಿಸುವಂತೆ ಓಲಾ ಸಂಸ್ಥೆಯ ಅಧಿಕಾರಿಗಳಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಶಿವಮೊಗ್ಗದ ನಿವಾಸಿ ಶಂಕರಯ್ಯ ಅವರು, 2022ರ ಮೇ 26ರಂದು ಆನ್ಲೈನ್ ಮೂಲಕ ₹1,51,071 ಪಾವತಿಸಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕೊಂಡಿದ್ದರು. ಸ್ಕೂಟರ್ಗೆ ಎಂಟು ವರ್ಷಗಳ ಬ್ಯಾಟರಿ ವಾರಂಟಿ ಮತ್ತು ಇತರೆ ಭಾಗಗಳಿಗೆ ಮೂರು ವರ್ಷಗಳ ವಾರಂಟಿ ಇದೆ ಎಂದು ತಿಳಿದುಬಂದಿದೆ.

2022ರ ಜುಲೈ 10ರಂದು ಸ್ಕೂಟರ್ ಸ್ಟಾರ್ಟ್ ಆಗದ ಕಾರಣ ಶಂಕರಯ್ಯ ಎರಡು ದಿನಗಳ ನಂತರ ರಿಪೇರಿಗೆ ಓಲಾ ಸರ್ವೀಸ್ ಸೆಂಟರ್ಗೆ ನೀಡಿದ್ದರು. ಅಲ್ಲಿ ರಿಪೇರಿ ಮಾಡಲಾಗಿತ್ತು. 2025ರ ಜನವರಿ 9ರಂದು ಸ್ಕೂಟರ್ ಸ್ಟಾರ್ಟ್ ಆಗದ ಕಾರಣ ಅದನ್ನು ಶಂಕರಯ್ಯ ಓಲಾ ಸಂಸ್ಥೆಯವರ ಗಮನಕ್ಕೆ ತಂದಿದ್ದರು. ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಜನವರಿ 18ರಂದು ಸ್ಕೂಟರನ್ನು ದುರಸ್ತಿಗೆ ಬಿಟ್ಟು ಆನ್ಲೈನ್ನಲ್ಲಿ ದೂರು ದಾಖಲಿಸಿದ್ದರು. ಅದಕ್ಕೆ ಮಾರ್ಚ್ 3ರಂದು ಪ್ರತಿಕ್ರಿಯಿಸಿದ್ದ ಸಂಸ್ಥೆಯವರು ₹90,000 ಪಾವತಿಸಿದಲ್ಲಿ ಸ್ಕೂಟರ್ ರಿಪೇರಿ ಮಾಡುವುದಾಗಿ ಹೇಳಿದ್ದರು.

ಸ್ಕೂಟರ್ ಇನ್ನೂ ವಾರಂಟಿ ಅವಧಿಯಲ್ಲಿರುವುದರಿಂದ ಹಣ ಪಡೆಯದೇ ರಿಪೇರಿ ಮಾಡಿಕೊಡುವಂತೆ ಶಂಕರಯ್ಯ ಕೋರಿದ್ದರು. ಅದಕ್ಕೆ ಪ್ರತಿಕ್ರಿಯೆ ಬಾರದೇ ಇದ್ದಾಗ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಶಿವಮೊಗ್ಗದ ಓಲಾ ಸರ್ವೀಸ್ ಸೆಂಟರ್ ವ್ಯವಸ್ಥಾಪಕರು, ಬೆಂಗಳೂರಿನ ಓಲಾ ಎಲೆಕ್ಟ್ರಿಕಲ್ ಟೆಕ್ನಾಲಜಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ವ್ಯವಸ್ಥಾಪಕರ ವಿರುದ್ಧ ಸೇವಾ ನ್ಯೂನ್ಯತೆ ಕುರಿತು ಶಂಕರಯ್ಯ ದೂರು ನೀಡಿದ್ದರು. ವಾರಂಟಿ ಅವಧಿ ಇದ್ದರೂ ರಿಪೇರಿ ಮಾಡಿಕೊಡದೇ, ಸ್ಕೂಟರ್ ಅನ್ನು ತಮ್ಮ ಅಧೀನದಲ್ಲಿಯೇ ಇಟ್ಟುಕೊಂಡು ಓಲಾ ಸಂಸ್ಥೆಯವರು ಸೇವಾನ್ಯೂನ್ಯತೆ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ದೂರನ್ನು ದಾಖಲಿಸಿಕೊಂಡು ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಎದುರುದಾರರಿಗೆ ಆಯೋಗ ನೋಟಿಸ್ ನೀಡಿದ್ದು, ಆದರೆ ಎದುರುದಾರರು ವಿಚಾರಣೆಗೆ ಗೈರು ಹಾಜರಾಗಿದ್ದರಿಂದ ಏಕಪಕ್ಷೀಯ ಎಂದು ಪರಿಗಣಿಸಿ ಆದೇಶಿಸಲಾಗಿದೆ.

ದೂರುದಾರ ಸಲ್ಲಿಸಿದ ಪ್ರಮಾಣಪತ್ರ, ದಾಖಲಾತಿ ಪರಿಶೀಲಿಸಿ ಅವರ ವಾದ ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಹಾಗೂ ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂದ ಪೀಠ, ಸ್ಕೂಟರ್ ವಾರಂಟಿ ಅವಧಿಯಲ್ಲಿದ್ದರೂ ಸಹ ರಿಪೇರಿ ಮಾಡಿಕೊಡದೇ ಓಲಾ ಸೇವಾ ನ್ಯೂನ್ಯತೆ ಎಸಗಿದೆ ಎಂದು ತೀರ್ಮಾನಿಸಿದೆ.

ದೂರುದಾರರಿಗೆ ಪರಿಹಾರ ಮೊತ್ತವನ್ನು ವಾರ್ಷಿಕ ಶೇ 10ರ ಬಡ್ಡಿ ಸೇರಿಸಿ ಆದೇಶವಾದ 45 ದಿನಗಳ ಒಳಗಾಗಿ ಪಾವತಿಸಲು, ತಪ್ಪಿದ್ದಲ್ಲಿ ವಾರ್ಷಿಕ ಶೇ 12ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ಕೊಡುವಂತೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.