‘ಮಹಿಳೆ ಎಂಬ ಕಾರಣಕ್ಕೆ ಬಾನು ಮುಷ್ತಾಕ್ ಗೆ ವಿರೋಧ’
ಲೇಖಕಿ ಬಾನು ಮುಷ್ತಾಕ್ ಮಹಿಳೆ ಎಂಬ ಕಾರಣಕ್ಕೆ ದಸರಾ ಉದ್ಘಾಟನೆಗೆ ಅವರನ್ನು ಆಯ್ಕೆ ಮಾಡಿರುವುದಕ್ಕೆ ಬಿಜೆಪಿಯವರು ವಿರೋಧಿಸುತ್ತಿದ್ದಾರೆ ಎಂದು ಆಯನೂರು ಮಂಜುನಾಥ್ ಹೇಳಿದರು. ಇಲ್ಲಿ ಬಾನು ಮುಷ್ತಾಕ್ ಮುಸ್ಲಿಂ ಸಮುದಾಯದವರು ಎಂಬುದಕ್ಕಿಂತ ಮಹಿಳೆ ಎಂಬ ಕಾರಣವೇ ಮುಖ್ಯವಾಗಿದೆ. ಈ ಹಿಂದೆ ಕೆ.ಎಸ್. ನಿಸಾರ್ ಅಹಮದ್ ಕೂಡ ದಸರಾ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು. ಅವರು ಅಲ್ಪಸಂಖ್ಯಾತರಲ್ಲವೇ ಎಂದು ಆಯನೂರು ಪ್ರಶ್ನಿಸಿದರು.