ಕೋಣಂದೂರು: ಶೌಚಾಲಯಗಳಿಲ್ಲದ ಮನೆಗಳನ್ನು ತುರ್ತಾಗಿ ಗುರುತಿಸಿ, ಪಂಚಾಯಿತಿಯಿಂದ ಶೌಚಾಲಯ ನಿರ್ಮಿಸಲು ಕಾವಲು ಪಡೆ ಸೂಚಿಸಬೇಕು ಎಂದು ನೋಡಲ್ ಅಧಿಕಾರಿ, ಮಾಳೂರು ಸಿಪಿಐ ಶ್ರೀಧರ್ ಹೇಳಿದರು.

ಇಲ್ಲಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಂಬಂಧಿತ ಮಿಷನ್ ಸುರಕ್ಷಾ ಅಭಿಯಾನದ ಸಭೆ ಉದ್ದೇಶಿಸಿ ಮಾತನಾಡಿದರು.

ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕುವುದು, ಒಂಟಿ ಪಾಲಕರ ಮಕ್ಕಳು, ಅನಾಥ ಮಕ್ಕಳು, ವಲಸೆ ಮಕ್ಕಳ ಬಗ್ಗೆ ನಿಗಾ ವಹಿಸುವುದು ಕಾವಲುಪಡೆ ಮಾಡಬೇಕಾದ ಪ್ರಮುಖ ಕಾರ್ಯಗಳಾಗಿವೆ. ವಸತಿ ನಿಲಯದ ವಿದ್ಯಾರ್ಥಿಗಳ ದಿನಚರಿಯನ್ನು ಸರಿಯಾಗಿ ನಿರ್ವಹಿಸುವುದು, ಮಕ್ಕಳಲ್ಲಿ ರಕ್ತ ಹೀನತೆ ತಡೆಗೆ ಸೂಕ್ತ ಆರೋಗ್ಯ ಮಾಹಿತಿಯನ್ನು ನೀಡಬೇಕು ಎಂದು ಸೂಚಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣ ವಾಸುದೇವ, ಉಪಾಧ್ಯಕ್ಷೆ ಸುಜಾತಾ ಚೂಡಾಮಣಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸಾವಿತ್ರಮ್ಮ, ಸಿ.ಆರ್.ಪಿ. ಕೆ.ಆರ್. ಮಮತಾ, ಆರೋಗ್ಯ ಇಲಾಖೆಯ ಐಶ್ವರ್ಯಾ, ಉಪ ಪ್ರಾಚಾರ್ಯ ಕೆ.ಬಿ.ಪ್ರಕಾಶ್, ಪಿ.ಡಿ.ಒ. ನಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯರು, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.