ಶಿವಮೊಗ್ಗ: ಲ್ಯಾಪ್‌ಟಾಪ್ನೀಡಲು ಆಗ್ರಹಿಸಿ ಸರ್ಕಾರಿಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಶನಿವಾರಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ದ್ವಿತೀಯ ಮತ್ತು ತೃತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೂ ಲ್ಯಾಪ್‌ಟಾಪ್ ನೀಡಬೇಕು. ಸರ್ಕಾರ ಹಿಂದೆ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವ ಭರವಸೆ ನೀಡಿತ್ತು. ಚುನಾವಣಾ ನೀತಿ ಸಂಹಿತೆ ಕಾರಣ ವಾಪಸ್ ಕಳುಹಿಸಲಾಗಿತ್ತು.ಈಗ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆಮಾತ್ರ ವಿತರಿಸಲಾಗುತ್ತಿದೆ. ಇದರಿಂದ ಹಿಂದಿನ ವರ್ಷದ ವಿದ್ಯರ್ಥಿಗಳಿಗೆ ಅನ್ಯಾಯವಾಗಿದೆಎಂದುದೂರಿದರು.

ಸರ್ಕಾರಿಕಾಲೇಜಿನಲ್ಲಿ ಓದುತ್ತಿರುವ ಬಹುತೇಕ ವಿದ್ಯಾರ್ಥಿಗಳು ಬಡ ಕುಟುಂಬಕ್ಕೆ ಸೇರಿದವರು.ಲ್ಯಾಪ್‌ಟಾಪ್ ಕೊಳ್ಳುವಷ್ಟು ಶಕ್ತಿ ಇಲ್ಲ. ಚುನಾವಣಾ ನೀತಿ ಸಂಹಿತೆಪರಿಣಾಮ ಅನ್ಯಾಯವಾಗಿದೆ. ಹಾಗಾಗಿ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗೂನೀಡಬೇಕು. ಪರೀಕ್ಷಾ ಸಮಯಕ್ಕೂ ಮೊದಲುವಿತರಿಸಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿ ಮುಖಂಡರಾದಎ.ಭೂಮಿಕಾ, ಕಲ್ಪನಾ, ಎನ್.ಪವಿತ್ರಾ, ಆರ್.ಸಂಗೀತಾ, ರೇಖಾಶ್ರೀ, ಸಂದ್ಯಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.