ಶಿವಮೊಗ್ಗ:ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲು ಹೋಗಿದ್ದ ವೇಳೆ ಕುಂಸಿ ಪೊಲೀಸ್ ಠಾಣೆ ಪಿಎಸ್ಐನವೀನ್ ಮಠಪತಿ ಹಾಗೂಹೆಡ್ ಕಾನ್‌ಸ್ಟೆಬಲ್ ಬಸವಂತಪ್ಪ ಮೇಲೆ ಆರೋಪಿಗಳು ಹಲ್ಲೆ ನಡೆಸಿ,ಪರಾರಿಯಾಗಿದ್ದಾರೆ.

ಪಿಎಸ್ಐ ನವೀನ್ ಮಠಪತಿ ತಲೆಗೆ ಗಾಯವಾಗಿದೆ. ಬಸವಂತಪ್ಪ ಅವರ ಕೈಗೆ ಹೊಡೆತ ಬಿದ್ದಿದ್ದು, ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎರಡು ದಿನಗಳ ಹಿಂದೆ ಪಿಎಸ್‌ಐ 300 ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಂಡಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಮಂಡಘಟ್ಟ ಗ್ರಾಮದ ಮಧು ಹಾಗೂ ಮನು ಅವರನ್ನು ಬಂಧಿಸಲು ಗ್ರಾಮಕ್ಕೆ ಹೋದಾಗ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಪಿಎಸ್ಐ ಮಠಪತಿ ನೀಡಿದ ದೂರಿನ ಮೇಲೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಸಿಪಿಐಗೆ ಪ್ರಕರಣದ ತನಿಖೆ ವಹಿಸಲಾಗಿದೆ ಎಂದು ಎಸ್ಪಿ ಶಾಂತರಾಜು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.