ಶಿವಮೊಗ್ಗ: ನಗರ ಪಾಲಿಕೆ ವ್ಯಾಪ್ತಿಯ ಬಡಾವಣೆಗಳಿಗೆ₹96.50 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಸಲು ಅನುಮೋದನೆ ನೀಡಲಾಗಿದೆ.ಮೂರು ತಿಂಗಳ ಒಳಗೆಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜುಗೌಡಹೇಳಿದರು

ಜಿಲ್ಲಾಡಳಿತ ಸಭಾಂಗಣದಲ್ಲಿ ಗುರುವಾರ ನಡೆದ ಮಂಡಳಿಯ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ನಗರ ಪಾಲಿಕೆ ಹೊರವಲಯದ 13 ಪ್ರದೇಶಗಳಲ್ಲಿ ಸುಮಾರು 325 ಕಿಮೀ ವಿತರಣಾ ಕೊಳವೆ ಮಾರ್ಗ ಮತ್ತು 11 ಸಾವಿರ ಗೃಹ ಸಂಪರ್ಕ ಕಲ್ಪಿಸಲುಸಲ್ಲಿಸಿದ್ದ ಪ್ರಸ್ತಾವಕ್ಕೆ ಮಂಡಳಿ ಅನುಮೋದನೆ ನೀಡಿದೆ.ಹಣಕಾಸು ಇಲಾಖೆಯೂಒಪ್ಪಿಗೆನೀಡಿದೆ. ಸೋಮಿನಕೊಪ್ಪದಿಂದವಿರೂಪಿನಕೊಪ್ಪಕ್ಕೆ ಪೈಪ್‍ಲೈನ್ ಅಳವಡಿಸಲು ₹ 70 ಲಕ್ಷ, ಗೋವಿಂದಪುರ-ಗೋಪಿಶೆಟ್ಟಿಕೊಪ್ಪಕ್ಕೆ ತುಂಗಾ ನದಿಯಿಂದ 10 ಕಿ.ಮೀ ಪೈಪ್‍ಲೈನ್ ಮೂಲಕ ನೀರು ಪೂರೈಕೆ ಮಾಡಲು ₹ 12 ಕೋಟಿ ಪ್ರಸ್ತಾವನೆಗೂ ಶೀಘ್ರಮಂಜೂರಾತಿ ನೀಡಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಶಿವಮೊಗ್ಗ ಹೊರ ವಲಯದ ಕುವೆಂಪು ನಗರ, ಬೊಮ್ಮನಕಟ್ಟೆ, ಮಲವಗೊಪ್ಪ, ಪುರಲೆ, ಶಾಂತಿನಗರ, ವಾದಿಯಾಹುದಾ ನಗರ, ವೆಂಕಟೇಶ ನಗರ, ತ್ಯಾವರೆಚಟ್ನಳ್ಳಿ, ಬೊಮ್ಮನಕಟ್ಟೆ ಆಶ್ರಯ ಬಡಾವಣೆ, ಸೋಮಿನಕೊಪ್ಪ, ಮಲ್ಲಿಗೇನಹಳ್ಳಿ ಸೇರಿ 13 ಬಡಾವಣೆಗಳಿಗೆ ಕುಡಿಯುವ ನೀರು ಒದಗಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಬೇಕು. ಈ ಪ್ರದೇಶಗಳಲ್ಲಿ ಒಳಚರಂಡಿ ನಿರ್ಮಿಸುವ ಕುರಿತು ಡಿಪಿಆರ್ ಸಿದ್ಧಪಡಿಸಲು ಒಪ್ಪಿಗೆ ನೀಡಬೇಕು ಎಂದರು.

ಕಾಮಗಾರಿ ಪೂರ್ಣಕ್ಕೆ ವರ್ಷಗಡುವು:ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ಮುಂದಿನ ಸೆಪ್ಟಂಬರ್ ಒಳಗೆಪೂರ್ಣಗೊಳಿಸಬೇಕು. ₹ 124 ಕೋಟಿ ವೆಚ್ಚದಲ್ಲಿ 466 ಕಿ.ಮೀ ಉದ್ದದ ಪೈಪ್‍ಲೈನ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿ ಆಗಸ್ಟ್‌ನಲ್ಲಿಪೂರ್ಣಗೊಳ್ಳಬೇಕಾಗಿತ್ತು. ಮುಂದಿನ ಸೆಪ್ಟಂಬರ್ ಒಳಗಾಗಿ ಪೂರ್ಣಗೊಳಿಸಲೇಬೇಕು.ಕಾಮಗಾರಿಗಳ ಅನುಷ್ಠಾನಕ್ಕೆಹೊರಗುತ್ತಿಗೆ ಆಧಾರದ ಮೇಲೆ ಎಂಜಿನಿಯರ್‌ಗಳ ನೇಮಕಕ್ಕೆ ಅನುಮತಿ ನೀಡಲಾಗುವುದು ಎಂದು ರಾಜುಗೌಡ ಭರವಸೆ ನೀಡಿದರು.

ಒಳಚರಂಡಿ ಕಾಮಗಾರಿ: ನಗರದಲ್ಲಿ ಕೈಗೊಳ್ಳಲಾಗಿರುವ 222 ಕಿ.ಮೀ ವ್ಯಾಪ್ತಿಯ ಒಳಚರಂಡಿ ಕಾಮಗಾರಿಗಳಲ್ಲಿ 190 ಕಿ.ಮೀ ಪೂರ್ಣಗೊಂಡಿದೆ. 32 ಕಿ.ಮೀ ಕಾಮಗಾರಿ ಆದಷ್ಟುಶೀಘ್ರಪೂರ್ಣಗೊಳಿಸಬೇಕು. ಈಗಾಗಲೇ ಒಳಚರಂಡಿ ನಿರ್ಮಾಣವಾಗಿರುವ ಪ್ರದೇಶಗಳಲ್ಲಿ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಂಪರ್ಕ ಕಡಿತ ಎಚ್ಚರಿಕೆ: ಮನೆಗಳಿಗೆ ಸಂಪರ್ಕ ಪಡೆಯುವುದು ಆಯಾ ಮನೆಗಳ ಮಾಲೀಕರಜವಾಬ್ದಾರಿ. ನಗರ ಪಾಲಿಕೆಗೆ ₹ 300 ಶುಲ್ಕ ಪಾವತಿಸಿ ಸಂಪರ್ಕ ಕಲ್ಪಿಸಿಕೊಳ್ಳಬೇಕು. ಒಂದು ತಿಂಗಳ ಒಳಗಾಗಿ ಸಂಪರ್ಕ ಪಡೆಯಲು ವಿಫಲರಾಗುವ ಮನೆಗಳ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಆಯುಕ್ತ ಚಿದಾನಂದ ವಟಾರೆ, ಸದಸ್ಯ ಎಸ್.ಎನ್.ಚನ್ನಬಸಪ್ಪಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.