ಕೋಣಂದೂರು: ‘ರೋಟರಿ ಸಂಸ್ಥೆಗೆ ನೀಡುವ ದೇಣಿಗೆ ಸಮಾಜದ ಕಟ್ಟ ಕಡೆಯ ಪ್ರಜೆಗೆ ತಲುಪಿಸುವಲ್ಲಿ ಸಂಸ್ಥೆ ಶ್ರಮಿಸುತ್ತಿರುವುದು ಶ್ಲಾಘನೀಯ ’ಎಂದು ರೋಟರಿ ಜಿಲ್ಲಾ ಘಟಕದ ಗೌರ್ನರ್ ಕೆ. ಪಾಲಾಕ್ಷ ಹೇಳಿದರು.

ಇಲ್ಲಿನ ರೋಟರಿ ಭವನದಲ್ಲಿ ಈಚೆಗೆ ನಡೆದ ಜಿಲ್ಲಾ ಗೌರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘225 ದೇಶಗಳಲ್ಲಿ ಸಕ್ರೀಯವಾಗಿ ಕೆಲಸ ನಿರ್ವಹಿಸುತ್ತಿರುವ ರೋಟರಿ ಸಂಸ್ಥೆ ಭಾರತದಲ್ಲಿ ಪ್ರತಿ ವರ್ಷ 2,000 ಚಿಕ್ಕ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆ, 20,000 ಕ್ಯಾಟರ್ಯಾಟ್ ಶಸ್ತ್ರ ಚಿಕಿತ್ಸೆ, ಸರ್ಕಾರಿ ಆಸ್ಪತ್ರೆಗಳಿಗೆ ಉಚಿತವಾಗಿ 200 ಡಯಾಲಿಸಿಸ್ ಯಂತ್ರಗಳನ್ನು ನೀಡಲಾಗುತ್ತಿದೆ. 180 ಶಾಲೆಗಳಿಗೆ ತಲಾ ಒಂದು ಶಾಲೆಗೆ ₹ 30 ಲಕ್ಷ ನೀಡುತ್ತಿದೆ. 50 ಚೆಕ್ ಡ್ಯಾಮ್ ನಿರ್ಮಿಸಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಸ್ತೆ ಸುರಕ್ಷತಾ ಫಲಕಗಳನ್ನು ಮುಖ್ಯ ರಸ್ತೆಯ ತಿರುವಿನ ಎರಡು ಕಡೆಗಳಲ್ಲಿ ಅಳವಡಿಸಲಾಯಿತು. ಪೊಲೀಸರಿಗೆ ಬ್ಯಾರಿಕೇಡ್ಗಳನ್ನು ಹಸ್ತಾಂತರಿಸಿದರು. ಕ್ರೀಡಾಪಟು ಸೂರ್ಯಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷ ಕೆ.ಆರ್. ಸದಾಶಿವ, ಸಹಾಯಕ ಗೌರ್ನರ್ ಎಂ.ಬಿ. ಲಕ್ಷ್ಮಣಗೌಡ, ಜೋನಲ್ ಲೆಫ್ಟಿನೆಂಟ್ ಭರತ್ ಕುಮಾರ್ ಕೋಡ್ಲು, ಕಾರ್ಯದರ್ಶಿ ಈಶ್ವರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.