ಕೋಣಂದೂರು: ಸಮೀಪದ ಅರಳಸುರುಳಿ ಗ್ರಾಮದ 70 ವರ್ಷ ವಯಸ್ಸಿನ ಆಯುರ್ವೇದ ವೈದ್ಯ ಡಾ. ಎಸ್.ಸೂರ್ಯನಾರಾಯಣ ಉಡುಪ ಕೇವಲ ₹ 10 ಶುಲ್ಕ ಪಡೆಯುವ ಮೂಲಕ ಜನಮೆಚ್ಚುಗೆ ಪಡೆದಿದ್ದಾರೆ.

ಇವರು ಕಳೆದ 45 ವರ್ಷಗಳಿಂದ ಸ್ವಂತ ಊರಾದ ಅರಳಸುರುಳಿ ಮಾತ್ರವಲ್ಲದೆ ಅಕ್ಕಪಕ್ಕದ ಮಲ್ಲೇಸರ, ನೊಣಬೂರು ಗ್ರಾಮಗಳ ಮನೆಮನೆಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದು, ರೋಗಿಗಳ ಕಾಯಿಲೆ ಗುಣಮುಖಗೊಳಿಸಲು ಶ್ರಮಿಸುತ್ತಿದ್ದಾರೆ.

ಉದ್ಯಾವರದ ಧರ್ಮಸ್ಥಳ ಆಯುರ್ವೇದ ಕಾಲೇಜಿನಲ್ಲಿ 1979ರಲ್ಲಿ ಬಿ.ಎಸ್ಸಿ (ಆಗ ಇದು ವೈದ್ಯ ಪದವಿ) 4ನೇ ರ್ಯಾಂಕ್ನೊಂದಿಗೆ ಪೂರೈಸಿದರು. ನಂತರ ಅರಳಸುರುಳಿಯ ಮನೆಯಲ್ಲಿಯೇ ಚಿಕ್ಕದಾಗಿ ‘ಚೇತನ’ ಎಂಬ ಹೆಸರಿನಲ್ಲಿ ಆಸ್ಪತ್ರೆ ಪ್ರಾರಂಭಿಸಿದರು. ಹಳ್ಳಿಗಾಡಿನ ಪ್ರದೇಶವಾದ್ದರಿಂದ ಜನ ಆರಂಭದಲ್ಲಿ ಇವರ ಆಸ್ಪತ್ರೆ ಕಡೆ ಬರುತ್ತಿರಲಿಲ್ಲ. ಯಾವುದೇ ವಾಹನ ಇಲ್ಲದಿರುವ ಸಂದರ್ಭದಲ್ಲಿ ಸ್ವತಃ ಇವರೇ ಮನೆಮನೆಗೆ ತೆರಳಿ ಅತಿ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡಿ ಬರುವುದನ್ನು ರೂಢಿ ಮಾಡಿಕೊಂಡರು.

ಇವರ ವೃತ್ತಿ ಜೀವನವು ಕಾಲ್ನಡಿಗೆಯಿಂದ ಪ್ರಾರಂಭವಾಗಿದೆ. ಈಗಲೂ ಅರ್ಧ ದಿನ ಆಸ್ಪತ್ರೆಯಲ್ಲಿ ಸೇವೆ ನೀಡಿ ನಂತರ ಮಲ್ಲೇಸರ ಮತ್ತು ನೊಣಬೂರು ಹಾಗೂ ಸುತ್ತಮುತ್ತಲ ಊರುಗಳ ಮನೆಗಳಿಗೆ ತೆರಳಿ ಚಿಕಿತ್ಸೆ ನೀಡುತ್ತಾರೆ. ತಮ್ಮೂರಿಗೆ ಹುಡುಕಿಕೊಂಡು ಬರುವ ಬಡ ಗ್ರಾಮಸ್ಥರ ಹತ್ತಿರ ಹಣ ಇಲ್ಲದಿದ್ದಾಗ ತಾವೇ ಬಸ್ ಛಾರ್ಜ್ಗೆ ಹಣ ಕೊಟ್ಟು ಕಳಿಸುವುದನ್ನೂ ಅಭ್ಯಾಸ ಮಾಡಿಕೊಂಡಿದ್ದಾರೆ.

ಮಳೆಗಾಲದಲ್ಲಿ ಗದ್ದೆಗಳ ನಡುವೆ, ಹಳ್ಳ್ಳ– ಕೊಳ್ಳಗಳನ್ನು ದಾಟಿ ಸಾಗಿ ಚಿಕಿತ್ಸೆ ನೀಡಿದ್ದನ್ನು ಸ್ಮರಿಸಿಕೊಳ್ಳುವ ಅವರು ಒಮ್ಮೆ ಮಳೆಗಾಲದಲ್ಲಿ ಬಿಳ್ಳೋಡಿಯಲ್ಲಿ ಶರಾವತಿ ನದಿಯಲ್ಲಿ ತಮ್ಮನ್ನು ಹೊತ್ತುಕೊಂಡು ಗ್ರಾಮಸ್ಥರು ತಮ್ಮೂರಿಗೆ ಕರೆದುಕೊಂಡು ಹೋಗಿದ್ದನ್ನು ನೆನಪಿಸಿಕೊಳ್ಳುತ್ತಾರೆ.

‘ದುಡ್ಡಿಗಾಗಿ ಕೆಲಸ ಮಾಡಬಾರದು. ಹಳ್ಳಿಗರಿಗೆ ವೈದ್ಯರ ಸೇವೆ ಸುಲಭ ದರದಲ್ಲಿ ಸಿಗಬೇಕು ಎಂಬುದು ನನ್ನ ತಂದೆ ಆಶಯವಾಗಿತ್ತು. ವೈದ್ಯ ವೃತ್ತಿ ಜವಾಬ್ದಾರಿಯಿಂದ ಕೂಡಿದ್ದು ಎಂಬುದನ್ನು ತಂದೆ ಹೇಳುತ್ತಿದ್ದರು’ ಎಂದು ಡಾ.ಉಡುಪು ಹೇಳುತ್ತಾರೆ.

‘ಗ್ರಾಮೀಣ ಭಾಗಗಳಲ್ಲಿ ಆರೋಗ್ಯದ ಬಗ್ಗೆ ನಿಗಾ ವಹಿಸುವವರ ಪ್ರಮಾಣ ಕಡಿಮೆ ಇದೆ. ಹೀಗಾಗಿ ದಿನದ 24 ಗಂಟೆಯೂ ಆರೋಗ್ಯ ಸೇವೆ ಕೊಡುತ್ತಿದ್ದೇನೆ’ ಎಂದು ತಿಳಿಸುವ ಉಡುಪ ಅವರಿಗೆ ಪತ್ನಿ ಜಯಲಕ್ಷ್ಮೀ ಮತ್ತು ಮಕ್ಕಳು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.

ವಾತ, ಪಿತ್ತ, ಕಸ, ಮಂಡಿನೋವು ಕಾಯಿಲೆಗಳಿಗೆ ದೂರದ ಊರುಗಳಾದ ಮೇಗರವಳ್ಳಿ, ರಿಪ್ಪನ್ಪೇಟೆ, ಹೊಸನಗರ, ತೀರ್ಥಹಳ್ಳಿ ಭಾಗಗಳಿಂದ ಜನರು ಇವರ ಬಳಿ ಚಿಕಿತ್ಸೆಗೆ ಬರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.