ಸಾಗರವನ್ನು ಜಿಲ್ಲಾ ಕೇಂದ್ರವೆಂದು ಘೋಷಿಸಲು ಒತ್ತಾಯಿಸಿ ನಡೆದ ಮೆರವಣಿಗೆಯಲ್ಲಿ ಜಾಗಟೆ ಸದ್ದು ಕೇಳಿ ಬಂದಿದ್ದು ವಿಶೇಷವಾಗಿತ್ತು. ಸರ್ಕಾರಕ್ಕೆ ಜಾಗಟೆಯ ಧ್ವನಿ ಮುಟ್ಟಲಿ ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಡಿ.ದಿನೇಶ್ ತಿಳಿಸಿದರು.
ಸಾಗರದಲ್ಲಿ ನಡೆದ ಬಹಿರಗ ಸಭೆಯಲ್ಲಿ ಸೇರಿದ್ದ ಜನಸ್ತೋಮ
‘ಜಿಲ್ಲಾ ಕೇಂದ್ರದ ಅನಿವಾರ್ಯತೆ ಇದೆ’
‘ಮಲೆನಾಡಿನ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಸಾಗರ ಜಿಲ್ಲಾ ಕೇಂದ್ರವಾಗುವ ಅನಿವಾರ್ಯತೆ ಇದೆ. ಇಲ್ಲಿ 2.80 ಲಕ್ಷ ಅರಣ್ಯಭೂಮಿ ಸಾಗುವಳಿದಾರರ ಪೈಕಿ 2.40 ಲಕ್ಷ ಜನರ ಸಕ್ರಮೀಕರಣದ ಅರ್ಜಿ ತಿರಸ್ಕೃತಗೊಂಡಿದೆ. ಮಲೆನಾಡು ಅಭಿವೃದ್ಧಿ ಮಂಡಳಿ ಇದ್ದರೂ ಅದಕ್ಕೆ ಅಗತ್ಯ ಅನುದಾನವಿಲ್ಲದಾಗಿದೆ’ ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು.