ಶಿಕಾರಿಪುರ: ನಾವೆಲ್ಲರೂ ಪರಿಸರ ಕಾಳಜಿ ಮರೆತಿದ್ದೇವೆ. ಅದು ನಮ್ಮ ಮುಂದಿನ ಪೀಳಿಗೆ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.

ತಾಲ್ಲೂಕಿನ ಬಿಳಿಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ಮಾವು, ತೆಂಗು ಕೃಷಿಕರ ಅಭಿವೃದ್ಧಿ ಮಾರಾಟ ಸಹಕಾರ ಸಂಘ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಿಸರ ಸಂರಕ್ಷಣೆ ನಾನೇಕೆ ಮಾಡಲಿ ಎನ್ನುವುದು ಬಿಟ್ಟು ಎಲ್ಲರೂ ಸಸಿ ನೆಟ್ಟು ಅವುಗಳನ್ನು ಮಕ್ಕಳಂತೆ ಬೆಳೆಸಬೇಕು. ವಿದ್ಯಾರ್ಥಿಗಳಿಗೆ ಸಸಿ ನೀಡಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.

ಪರಿಸರ, ಭೂಮಿ ರಕ್ಷಣೆಗಾಗಿ ಶೇ 33ರಷ್ಟು ಕಾಡು ಇರಬೇಕು ಎನ್ನುವ ನಿಯಮವಿದೆ. ಅದನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶಕ್ಕಾಗಿ ನಮ್ಮ ಸಹಕಾರ ಸಂಘ ವಿನೂತನ ಪ್ರಯುತ್ನ ನಡೆಸಿದೆ ಎಂದು ಮಾವು ಬೆಳೆಗಾರರ ಸಂಘ ನಿರ್ದೇಶಕ ಪರಮೇಶ್ವರಪ್ಪ ಅಡಗಂಟಿ ಹೇಳಿದರು.

ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನಾಗರಾಜಸ್ವಾಮಿ, ನಿರ್ದೇಶಕರಾದ ಶಿವರಾಜ ಪಾಟೀಲ್, ಗ್ರಾ.ಪಂ. ಅಧ್ಯಕ್ಷ ಶಿವ್ಯಾನಾಯ್ಕ, ಎಸ್ಡಿಎಂಸಿ ಅಧ್ಯಕ್ಷ ಮುರುಗೇಂದ್ರ, ಮುಖಂಡರಾಧ ಕೆ.ಎಸ್. ಗುರುಮೂರ್ತಿ, ಶಿವರುದ್ರಪ್ಪಗೌಡ್ರು, ಕೃಷಿ ಅಧಿಕಾರಿ ಕಿರಣ್ಕುಮಾರ್, ತೋಟಗಾರಿಕೆ ಇಲಾಖೆಯ ಡಿ. ಕುಮಾರ್, ಅರಣ್ಯ ಇಲಾಖೆಯ ರೇವಣಸಿದ್ದಯ್ಯ ಹಿರೇಮಠ, ಜಾವಿದ್ ಅಂಗಡಿ, ಬಿಇಒ ಲೋಕೇಶ್ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.