ಶಿವಮೊಗ್ಗ: ನಿರ್ಬಂಧಗಳನ್ನು ಲೆಕ್ಕಿಸದೆ ಹಬ್ಬದ ದಿನವಾದ ಬುಧವಾರ ಜನರು ಗಾಂಧಿ ಬಜಾರ್ ನಲ್ಲಿ ಹೂವು. ಹಣ್ಣು. ತರಕಾರಿ ಖರೀದಿಸಿದರು. ಎಪಿಎಂಸಿ ತರಕಾರಿ ಮಾರುಕಟ್ಟೆ ಬಂದ್ ಆದ ಕಾರಣ ಗಾಂಧಿ ಬಜಾರ್ ಗೆ ಜನ ಮುಗಿಬಿದ್ದಿದ್ದರು

ಮೀನು ಮಾರುಕಟ್ಟೆ, ಗಾಂಧಿ ಬಜಾರ್ ಮುಖ್ಯರಸ್ತೆ, ಸಿನಿಮಾ ರಸ್ತೆ ಹಾಗೂ ಬಜಾರ್ ನ ಸುತ್ತಮುತ್ತ ತರಕಾರಿ, ದಿನಸಿ ಮತ್ತು ಅಗತ್ಯವಸ್ತಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಬಿ.ಎಚ್ ರಸ್ತೆಯಲ್ಲಿ ಜನರನ್ನ ಚದುರಿಸಲು ಪೊಲೀಸರು ಲಾಠಿ ಬೀಸಿದರು.

ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಜನರನ್ನು ತಡೆಯಲು ಬ್ಯಾರಿಕೇಡ್ ನಿರ್ಮಿಸಿದರೂ ಜನರು ಒಳ ಮಾರ್ಗಗಳಿಂದ ಬಜಾರ್ ಪ್ರವೇಶಿಸಿ ಖರೀದಿಸುತ್ತಿದ್ದರು. ಆಟೊರಿಕ್ಷಾಗಳ ಸಂಚಾರವೂ ಕಂಡುಂತು. ಅಗತ್ಯ ವಸ್ತುಗಳ ದರ ಗಗನಕ್ಕೇರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.