ಶಿವಮೊಗ್ಗ: ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಪ್ರಾಧ್ಯಾಪಕ ಸಿಬ್ಬಂದಿಯೇ ಅಲ್ಲದ ಡಾ.ಸಿದ್ದಪ್ಪ ಅವರನ್ನು ಶಿವಮೊಗ್ಗ ವೈದ್ಯಕೀಯ ಕಾಲೇಜು ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ನ್ಯಾಯಾಲಯವೇ 60 ವರ್ಷ ತುಂಬಿದವರನ್ನು ಯಾವುದೇ ತಾತ್ಕಾಲಿಕ ಅಥವಾ ಕಾಯಂ ಹುದ್ದೆಯಲ್ಲಿ ಮುಂದುವರಿಸಬಾರದು ಎಂದು ಆದೇಶ ನೀಡಿದೆ. ಇದು ವೈದ್ಯಕೀಯ ಕಾಲೇಜು ಬೈಲಾದಲ್ಲೂ ಇದೆ. ಆದರೆ, ಬಿಜೆಪಿ ಸರ್ಕಾರ ನಿಯಮ ಬಾಹಿರವಾಗಿ ನೇಮಿಸಿದೆ ಎಂದು ವಕೀಲ ಕೆ.ಪಿ. ಶ್ರೀಪಾಲ್ ಆರೋಪಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಅವರ ಮೇಲೆ ಹಲವು ಆರೋಪಗಳಿದ್ದವು. ಆಗ ಹುದ್ದೆಯಿಂದ ತೆಗೆದುಹಾಕಲಾಗಿತ್ತು. ವಯೋವೃದ್ಧರಾದ ಅವರು ಒಂದು ದಿನವೂ ಕೋವಿಡ್ ಕೇಂದ್ರಗಳ ಪರಿಶೀಲನೆ ಮಾಡಲು ಹೋಗಿಲ್ಲ. ಅವರ ಆಯ್ಕೆ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ವ್ಯಕ್ತಿಗತ ಲಾಭ ಅಡಗಿದೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.