ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟದ (ಶಿಮುಲ್) ಚುನಾವಣೆಯಲ್ಲಿ ಅಂತಿಮವಾಗಿ ಹಲವು ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.
ಶಿವಮೊಗ್ಗ ವಿಭಾಗದಿಂದ ಎಸ್.ಕುಮಾರ, ಎಚ್.ಬಿ. ದಿನೇಶ್, ಕೆ.ಎಲ್.ಜಗದೀಶ್ವರ, ಆನಂದ ಡಿ, ಟಿ.ಬಿ.ಜಗದೀಶ್ ಕಣದಲ್ಲಿ ಇದ್ದಾರೆ. ಸಾಗರ ವಿಭಾಗದಿಂದ ಬಿ.ಡಿ.ಭೂಕಾಂತ್, ಗಂಗಾಧರಪ್ಪ, ಟಿ.ಶಿವಶಂಕರಪ್ಪ, ಟಿ.ಎಸ್.ದಯಾನಂದಗೌಡ್ರು ಉಳಿದುಕೊಂಡಿದ್ದಾರೆ.
ಆ. 14ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿಯಾಗಿರುವ ತಹಶೀಲ್ದಾರ ಬಿ.ಎನ್.ಗಿರೀಶ್ ತಿಳಿಸಿದ್ದಾರೆ.