ಶಿವಮೊಗ್ಗ: ರೈತರು ಕೃಷಿಯನ್ನು ಕೇವಲ ಭಾವನಾತ್ಮಕವಾಗಿ ನೋಡಿದರೆ ಸಾಲದು, ಅದನ್ನು ಉದ್ಯಮವಾಗಿ ಪರಿಗಣಿಸಿ ವ್ಯವಸ್ಥಿತವಾಗಿ ಮಾಡಿದಾಗ ಮಾತ್ರ ನಿರಂತರ ಲಾಭ ಪಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ ರೈತ ಉತ್ಪಾದಕ ಕಂಪನಿಗಳ (ಎಫ್ಪಿ) ಸ್ಥಿತಿಗತಿ ಹಾಗೂ ಸಮಸ್ಯೆಗಳ ಕುರಿತು ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿಯೇ ಅತಿ ಹೆಚ್ಚು ಜನರಿಗೆ ಉದ್ಯೋಗ ಕೊಟ್ಟಿರುವ ಕೃಷಿ ಕ್ಷೇತ್ರ ಅತಿಹೆಚ್ಚು ಸವಾಲುಗಳನ್ನು ಎದುರಿಸುತ್ತಿರುವ ರಂಗವೂ ಹೌದು. ಮಣ್ಣು, ನೀರು, ಹವಾಮಾನ, ಮಾರುಕಟ್ಟೆಯ ಏರಿಳಿತಗಳ ಸವಾಲನ್ನು ಮೆಟ್ಟಿ ನಿಂತು ಮುಂದುವರಿಯಬೇಕಿರುವುದರಿಂದ ರೈತರು ಸದಾ ಅನಿಶ್ಚಿತತೆಯನ್ನು ಎದುರಿಸುತ್ತಾರೆ. ಬೆಳೆದ ಬೆಳೆಗೆ ಉತ್ತಮ ಬೆಲೆ ಬರಬೇಕು. ಪ್ರತೀ ವರ್ಷ ನಿರಂತರ ಆದಾಯ ಸಿಗಬೇಕು ಎಂದಾದಲ್ಲಿ ರೈತರು ಸಂಘಟಿತರಾಗಿ ಕಡಿಮೆ ತೊಂದರೆ, ಹೆಚ್ಚಿನ ಲಾಭ ನಿರೀಕ್ಷೆಯ ಮಂತ್ರ ಒಳಗೊಂಡ ಎಫ್ಪಿಒಗಳ ಮೂಲಕ ಸಕ್ರಿಯರಾಗಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್ ಮಾತನಾಡಿ, ‘ರೈತರ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ಮಾರುಕಟ್ಡೆಗೆ ಕಿಸಾನ್ ಮಾಲ್, ರೈತ ಮಾರ್ಕೆಟ್ ಮಾಡುವ ಪ್ರಸ್ತಾಪ ಇಟ್ಟಿದ್ದೀರಿ. ಅದನ್ನು ಹೇಗೆ ಮಾಡಬೇಕು, ನಿರ್ವಹಣೆ ಹೇಗೆ ಎಂಬುದರ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ರೈತ ಉತ್ಪಾದಕ ಕಂಪನಿಗಳ ಒಕ್ಕೂಟದ ತಜ್ಞ ನಿರ್ದೇಶಕ ಭದ್ರೀಶ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 49 ಎಫ್ಪಿಒಗಳಿವೆ. ಅವುಗಳನ್ನು ಸೇರಿಸಿ ಒಕ್ಕೂಟ ರಚಿಸಲಾಗಿದೆ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಂ.ಡಾ.ಕಿರಣ್ ಕುಮಾರ್, ನಬಾರ್ಡ್ ಡಿಡಿಎಂ ಶರತ್ ಪಿ. ಗೌಡ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಎ. ಬಾಬುರತ್ನ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಜಿ.ಸವಿತಾ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಕುಮಾರ್ ಇದ್ದರು. ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ನೂರಾರು ರೈತರು ಕಾರ್ಯಾಗಾರದಲ್ಲಿ ಪಾಲ್ಗೊಂಡರು.

ಎಫ್ಪಿಒಗಳಿಗೆ ಸ್ವಂತ ಜಾಗ, ತೆರಿಗೆ ರಿಯಾಯ್ತಿಗೆ ಮನವಿ

ಉಡುತಡಿ ರೈತ ಉತ್ಪಾದಕ ಕಂಪೆನಿಯ ಬಿ.ಅನೂಪ್ ಹಾಗೂ ತುಂಗಾ ರೈತ ಉತ್ಪಾದಕ ಕಂಪೆನಿಯ ರಾಜಪ್ಪ ಮಾತನಾಡಿ ಗ್ರಾಮ ಪಂಚಾಯ್ತಿಗಳ ಮಟ್ಟದಲ್ಲಿ ಎಫ್ಪಿಒಗಳಿಗೆ ಸ್ವಂತ ಜಾಗ ಕೊಡಿ ಎಪಿಎಂಸಿ ಉಪ ಪ್ರಾಂಗಣಗಳಲ್ಲಿ ಖಾಲಿ ಬಿದ್ದಿರುವ ಮಳಿಗೆ ಹಾಗೂ ಗೊಡೋನ್ಗಳನ್ನು ರಿಯಾಯಿತಿ ದರದಲ್ಲಿ ಕೊಡಿಸಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ರೈತರ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ಅವುಗಳ ಬ್ರ್ಯಾಂಡ್ ಸೃಷ್ಟಿಸಲು ಅಗತ್ಯ ತರಬೇತಿ ರಿಯಾಯಿತಿ ದರದಲ್ಲಿ ಎಫ್ಪಿಒಗಳಗೆ ರಸಗೊಬ್ಬರ ಒದಗಿಸಿಕೊಡುವಂತೆ ಹಾಗೂ ಮೂರು ತಿಂಗಳಿಗೊಮ್ಮೆ ಜಿ.ಪಂ ಮಟ್ಟದಲ್ಲಿ ಪರಿಶೀಲನಾ ಸಭೆ ಮಾಡುವಂತೆ ಕೋರಿದರು.

ಬೆಜ್ಜವಳ್ಳಿಯ ಮಂಡಗದ್ದೆ ರೈತ ಉತ್ಪಾದಕ ಸಂಸ್ಥೆಯ ಎಚ್.ಆರ್. ಸತೀಶ್ ಮಾತನಾಡಿ ಎಫ್ಪಿಒಗಳಿಗೆ ಅನುದಾನ ಕಡಿತಗೊಳಿಸಿದ್ದಾರೆ. ಸಿಬ್ಬಂದಿಯ ವೇತನ ಕಡಿತ ಮಾಡಲಾಗಿದೆ. ಇದರಿಂದ ಸಂಸ್ಥೆಗಳ ಮೂಲ ಉದ್ದೇಶಕ್ಕೆ ತೊಂದರೆ ಆಗಿದೆ. ಸಾವಯವ ಗೊಬ್ಬರ ತಯಾರಿಕೆಗೆ ಬಂಡವಾಳ ಕೊರತೆ ಎದುರಾಗಿದೆ. ಹೀಗಾಗಿ ಬೇಕಾದ ಸಂಪನ್ಮೂಲ ಕಲ್ಪಿಸಿಕೊಡಿ ಎಂದು ಒತ್ತಾಯಿಸಿದರು. ಎಫ್ಪಿಒಗಳು ತಮ್ಮ ಆದಾಯದಲ್ಲಿ ಶೇ 25ರಷ್ಟು ತೆರಿಗೆ ಕಟ್ಟಬೇಕಿದೆ. ಕೃಷಿ ಉದ್ದೇಶಕ್ಕೆ ಮಾಡಿದ ಕಂಪೆನಿಗಳು ಎಂಬ ಕಾರಣಕ್ಕೆ ತೆರಿಗೆ ರಿಯಾಯಿತಿ ಕೊಡಲು ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಜಿಲ್ಲಾಧಿಕಾರಿಗೆ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.