ಶನಿವಾರ, ಸೆಪ್ಟೆಂಬರ್ 18, 2021
28 °C
ಭಾನುವಾರ 42 ಜನರಿಗೆ ಕೊರೊನಾ ಸೋಂಕು, ಒಟ್ಟು ಸೋಂಕಿತರು 446

ಒಂದೇ ದಿನ ಜಿಲ್ಲೆಯ 28 ಜನರು ಕೊರೊನಾ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಿಲ್ಲೆಯಲ್ಲಿ ಭಾನುವಾರ ಸೋಂಕಿಗೆ ಒಳಗಾಗಿದ್ದ 28 ಜನರು ಗುಣಮುಖರಾಗಿದ್ದಾರೆ. ಅವರನ್ನು ಮೆಗ್ಗಾನ್ ಆರೈಕೆ ಕೇಂದ್ರದಿಂದ ಅವರ ಮನೆಗಳಿಗೆ ಕಳುಹಿಸಿಕೊಡಲಾಯಿತು. 

ಮನೆಯಲ್ಲೇ ಕ್ವಾರಂಟೈನ್‌ನಲ್ಲಿ ಇರುವಂತೆ ಅವರಿಗೆಲ್ಲ ಸೂಚಿಸಲಾಗಿದೆ. ಇದುವರೆಗೂ 146 ಜನರು ಗುಣಮುಖರಾಗಿದ್ದಾರೆ. 242 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

42 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 446ಕ್ಕೇರಿದೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 13 ಜನರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ.

ಬೆಂಗಳೂರು ಸೇರದಿಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಶಿವಮೊಗ್ಗಕ್ಕೆ ಬಂದಿರುವ 6 ಜನರಲ್ಲಿ ಸೋಂಕು ಇರುವುದು ಖಚಿತಪಟ್ಟಿದೆ. ಕೋವಿಡ್‌ ರೋಗಿಗಳ ಪ್ರಥಮ  ಸೋಂಕಿತರ ಪ್ರಥಮ ಸಂಪರ್ಕದಿಂದ 17 ಜನರಿಗೆ ಸೋಂಕು ತಗುಲಿದೆ. ಆರೋಗ್ಯ ಸಮಸ್ಯೆಯ ಕಾರಣ ಚಿಕಿತ್ಸೆಗೆ ದಾಖಲಾಗಿದ್ದ ಐವರ ಗಂಟಲು ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದು, ಸೋಂಕಿನ ಮೂಲ ಹುಡುಕಲಾಗುತ್ತಿದೆ.

124 ಕಂಟೈನ್ಮೆಂಟ್ ಜೋನ್‌:

ಜಿಲ್ಲೆಯಲ್ಲಿ 124 ಕಂಟೈನ್ಮೆಂಟ್ ಜೋನ್‌ಗಳನ್ನು ಮಾಡಲಾಗಿದೆ. 14 ದಿನಗಳನ್ನು ಪೂರೈಸಿದ 8 ಜೋನ್‌ಗಳನ್ನು ತೆರವುಗೊಳಿಸಲಾಗಿದೆ.

ಇಬ್ಬರಿಗೆ ಕೊರೊನಾ ಸೋಂಕು (ಭದ್ರಾವತಿ):  

ಇಲ್ಲಿನ ಒಎಸ್ಎಂ ರಸ್ತೆಯ ಎರಡನೇ ತಿರುವಿನ 52 ಮತ್ತು 54 ವರ್ಷದ ಇಬ್ಬರು ಸಹೋದರರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇವರಿಬ್ಬರು ವಾರದ ಹಿಂದೆ ಬೆಂಗಳೂರಿನಿಂದ ಬಂದಿದ್ದರು  ಒಎಸ್ಎಂ ರಸ್ತೆಯ ಎರಡು ಬೀದಿಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಬೆಂಗಳೂರಿನಿಂದ ಬಂದಿದ್ದ ವ್ಯಕ್ತಿಗೆ ಸೋಂಕು (ತೀರ್ಥಹಳ್ಳಿ): 

ಬೆಂಗಳೂರಿನನಿಂದ ಮೂರು ದಿನದ ಹಿಂದೆ ಸೊಪ್ಪುಗುಡ್ಡೆ ಬಡಾವಣೆಯ ಸಂಬಂಧಿಕರ ಮನೆಗೆ ಬಂದಿದ್ದ  40 ವರ್ಷದ
ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ಭಾನುವಾರ ದೃಢಪಟ್ಟಿದೆ.

ಎರಡು ದಿನದ ಹಿಂದೆ ಜ್ವರ ಕಾಣಿಸಿಕೊಂಡಿದ್ದರಿಂದ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಕೊರೊನಾ ಸೋಂಕು ಪತ್ತೆ ಹಿನ್ನೆಲೆ ಈ ಬಡಾವಣೆ ಸೀಲ್‌ಡೌನ್‌ ಮಾಡಲಾಗಿದೆ. ಸುತ್ತಮುತ್ತಲಿನ ಪ್ರದೇಶವನ್ನು ಕಂಟೈನ್‌ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. 

ಮೂವರಲ್ಲಿ ಒಬ್ಬರಿಗೆ ಪಾಸಿಟಿವ್ (ಹೊಸನಗರ):

ಬೆಂಗಳೂರಿನಿಂದ  ಬೈಸೆ ಗ್ರಾಮ ಸಮೀಪದ ಕೆರೆಗದ್ದೆಗೆ ಬಂದಿದ್ದ ಮೂವರಲ್ಲಿ 39 ವರ್ಷದ ಒಬ್ಬರಿಗೆ ಪಾಸಿಟಿವ್‌ ಬಂದಿದೆ. ಉಳಿದ ಇಬ್ಬರಲ್ಲಿ ಸೋಂಕು ಕಂಡುಬಂದಿಲ್ಲ.

ಕೆರೆಗದ್ದೆಗೆ ಸಾಗುವ ಮಾರ್ಗದಲ್ಲಿ ಮುನ್ನೆಚ್ಚರಿಕಾ ಫಲಕ ಹಾಕಲಾಗಿದೆ. ಅಲ್ಲದೆ ಸೋಂಕಿತರ ಮನೆಯ ಸುತ್ತಮುತ್ತ ಔಷಧ ಸಿಂಪಡಿಸಲಾಗಿದೆ. ಕೆರೆಗದ್ದೆಯಲ್ಲಿ ಬಂದ ಪಾಸಿಟಿವ್ ಸೇರಿದಂತೆ ಮೂಡುಗೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ಮೂರಕ್ಕೇರಿದೆ. ಈ ಹಿಂದೆ ಹಿಲ್ಕುಂಜಿ ಗ್ರಾಮದಲ್ಲಿ ಬೆಂಗಳೂರಿನಿಂದ ಬಂದ ಮಗಳು ಮತ್ತು ಅಳಿಯನಿಗೆ ಸೋಂಕು ಪತ್ತೆಯಾಗಿತ್ತು.

ಮೂವರಿಗೆ ಕೊರೊನಾ ಸೋಂಕು (ಶಿಕಾರಿಪುರ):

‌ಶಿಕಾರಿಪುರ ತಾಲ್ಲೂಕಿನಲ್ಲಿ 3 ಮಂದಿಗೆ ಕೊರೊನಾ ಸೊಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ. ತಾಲ್ಲೂಕಿನ ನಂದಿಹಳ್ಳಿ ಗ್ರಾಮದ 30 ವರ್ಷದ ಪುರುಷನಿಗೆ, 44 ವರ್ಷದ ಮಹಿಳೆಗೆ ಹಾಗೂ ಮುಳುಕೊಪ್ಪ ಗ್ರಾಮದ 29 ವರ್ಷದ ಮಹಿಳೆಗೆ ಕೊರೊನಾ ಸೊಂಕು ತಗುಲಿರುವುದು ದೃಢಪಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು