ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಘರ್ಷಣೆ ವೇಳೆ ಚಾಕು ಇರಿತ: 9 ಮಂದಿ ಬಂಧನ

Published 23 ಸೆಪ್ಟೆಂಬರ್ 2023, 16:06 IST
Last Updated 23 ಸೆಪ್ಟೆಂಬರ್ 2023, 16:06 IST
ಅಕ್ಷರ ಗಾತ್ರ

ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗುರುವಾರ ನಡೆದಿದ್ದ ಘರ್ಷಣೆಯಲ್ಲಿ 5 ಮಂದಿಗೆ ಚಾಕು ಇರಿದಿದ್ದ  ಪ್ರಕರಣದಲ್ಲಿ  9 ಮಂದಿಯನ್ನು ಶನಿವಾರ ಬಂಧಿಸಲಾಗಿದೆ. 

ಪವನ್ , ಮಂಜುನಾಥ್,  ಚಂದನ್, ರಂಗನಾಥ್, ಮನೋಜ್, ಶ್ರೀನಿವಾಸ, ರಾಜಶೇಖರ್, ವಿಶ್ವನಂದನ್, ಶ್ಯಾಮ್ ರಾಬಿನ್ ಬಂಧಿತರು.

ಶಿವಮೊಗ್ಗ ನೇತಾಜಿ ಸರ್ಕಲ್‌ನಲ್ಲಿ, ಭಗತ್ ಯುವಕರ ಸಂಘದ ಹೆಸರಿನಲ್ಲಿ ಗಣಪತಿ ಪ್ರತಿಷ್ಟಾಪನೆ ಮಾಡಿದ್ದು, ಸೆಪ್ಟೆಂಬರ್ 21ರಂದು ರಾತ್ರಿ ಗಣಪತಿ ಪೆಂಡಾಲ್ ನಲ್ಲಿ ಅಂಧ ಯುವಕರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮ ಮುಗಿದಾಗ ಸ್ನೇಹಿತರ ನಡುವೆ ಜಗಳ ಆಗಿದ್ದು, ಈ ವೇಳೆ ನಡೆದ ಘರ್ಷಣೆಯಲ್ಲಿ ಕಿರಣ್, ಅಭಿಷೇಕ್, ಅರುಣ್, ರಾಜು, ಅಣ್ಣಪ್ಪ ಹಾಗೂ ಕಿಶೋರ್ ಎಂಬುವವರ  ಮೇಲೆ ಚಾಕುವಿನಿಂದ ಹಲೆ ಮಾಡಿದ್ದರಿಂದ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಬಗ್ಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT