ಸ್ಮಾರ್ಟ್ ಸಿಟಿ ಯೋಜನೆಯಡಿ ಮಹಾನಗರ ಪಾಲಿಕೆ ಎದುರಿನ ರಸ್ತೆಯಲ್ಲಿ ನಿರ್ಮಿಸಿರುವ ಪಾದಚಾರಿ ಮಾರ್ಗದಲ್ಲಿ ಗುಂಡಿ ಅಗೆದಿರುವುದು
ಜಿಲ್ಲಾಧಿಕಾರಿ ಕಚೇರಿ ಎದುರು ನಿರ್ಮಿಸಿರುವ ಬಸ್ ನಿಲ್ದಾಣದಲ್ಲಿ ನಿರ್ವಹಣೆ ಕಾಣದೆ ಹಾಳಾಗಿರುವ ವಿದ್ಯುತ್ ಸ್ಮಾರ್ಟ್ ಮೀಟರ್
ಸ್ಮಾರ್ಟ್ ರಸ್ತೆಗೆ ₹470 ಕೋಟಿ ವೆಚ್ಚ
ಜಲಮಂಡಳಿಯಿಂದ ಅಗೆತ ಸ್ಮಾರ್ಟ್ ಸಿಟಿ ಯೋಜನೆಯಡಿ ₹ 470.46 ಕೋಟಿ ವೆಚ್ಚದಲ್ಲಿ 110 ಕಿ.ಮೀ ಉದ್ದದ 8 ಸ್ಮಾರ್ಟ್ ರಸ್ತೆಗಳಲ್ಲಿ ಅಂಡರ್ ಗ್ರೌಂಡ್ ಮಾರ್ಗ ಎಚ್‌ಟಿ ಎಲ್‌ಟಿ ವಿದ್ಯುತ್ ಸಂಪರ್ಕ ಕುಡಿವ ನೀರು ಸರಬರಾಜು ಪೈಪ್ ಲೈನ್ ಅಳವಡಿಸಲಾಗಿದೆ. 120 ಕಿ.ಮೀ. ಉದ್ದದ ಪ್ರತ್ಯೇಕ ಬೈಸಿಕಲ್ ಪಾಥ್ ಹಾಗೂ ಪಾದಚಾರಿ ಮಾರ್ಗವನ್ನೂ ವಿನ್ಯಾಸಗೊಳಿಸಲಾಗಿದೆ. ಆದರೆ ಬೈಸಿಕಲ್ ಪಾಥ್ ಜನ ಬಳಕೆಗೆ ಸಿಕ್ಕಿಲ್ಲ. ಜಲಮಂಡಳಿಯಿಂದ ರಸ್ತೆಗಳ ನಡುವೆ ಗುಂಡಿ ಅಗೆದು ಅರ್ಧದಲ್ಲಿಯೇ ಬಿಡಲಾಗುತ್ತಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಮಗಾರಿ ವಿಳಂಬ; ಸಭೆ
ಇಂದು ‘ಮಹಾನಗರ ಪಾಲಿಕೆಗೆ ಹಸ್ತಾಂತರ ಪ್ರಕ್ರಿಯೆ ನಡೆದಿದೆ. ಸ್ಮಾರ್ಟ್ ಸಿಟಿಯಿಂದ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಆದ್ದರಿಂದ ಕೇಂದ್ರದ ವಸತಿ ಸಚಿವಾಲಯದೊಂದಿಗೆ ಏಪ್ರಿಲ್ 7 ರಂದು ಸಭೆ ನಡೆಯಲಿದೆ. ಸಭೆಯಲ್ಲಿ ಇನ್ನೂ ಒಂದು ತಿಂಗಳು ಹಸ್ತಾಂತರ ಪ್ರಕ್ರಿಯೆಯನ್ನು ಮುಂದೂಡುವ ಬಗ್ಗೆ ಚರ್ಚೆ ನಡೆಯಲಿದೆ. ಕಾಮಗಾರಿ ಪೂರ್ಣಗೊಳಿಸಲು ಸಲಹೆ ಸೂಚನೆ ಪಡೆಯಲಾಗುವುದು’ ಎಂದು ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕಿ ಕವಿತಾ ಯೋಗಪ್ಪನವರ್ ತಿಳಿಸಿದರು.