ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೋವಿಗಾಗಿ ಮೇವು’ ಅಭಿಯಾನಕ್ಕೆ ಚಾಲನೆ

Last Updated 8 ಜೂನ್ 2020, 11:17 IST
ಅಕ್ಷರ ಗಾತ್ರ

ಶಿವಮೊಗ್ಗ: ಸವಳಂಗ ರಸ್ತೆಯ ಬಾಪೂಜಿ ಆಯುರ್ವೇದಿಕ್‌ ವೈದ್ಯಕೀಯ ಕಾಲೇಜು ಆವರಣದಲ್ಲಿ ಮೇವಿನ ಬೀಜ ಬಿತ್ತುವ ಮೂಲಕಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ‘ಗೋವಿಗಾಗಿ ಮೇವು’ ಅಭಿಯಾನಕ್ಕೆ ಸೋಮವಾರಚಾಲನೆ ನೀಡಿದರು.

ನಮ್ಮ ಕನಸಿನ ಶಿವಮೊಗ್ಗ, ಶ್ರೀಗಂಧ, ವಿಶ್ವ ಹಿಂದು ಪರಿಷತ್, ಗೋ ಸಂರಕ್ಷಣಾ ವೇದಿಕೆ, ವಾಸವಿ ಪಬ್ಲಿಕ್ ಶಾಲೆ ಸಹಯೋಗದಲ್ಲಿನಮ್ಮೂರು ನಮ್ಮ ಗೋವುಗಳನ್ನು ಉಳಿಸಲು ಗೋವಿಗಾಗಿ ಮೇವು ಅಭಿಯಾನ ಆರಂಭಿಸಲಾಗಿದೆ.

ಗೋವುಗಳಿಗೆಮೇವು ನೀಡುವುದು ಪವಿತ್ರವಾದ ಕೆಲಸ.ಗೋ ತಾಯಿಗೆ ಮೇವುಒದಗಿಸಿದರೆ ಕುಟುಂಬಕ್ಕೂ ಶ್ರೇಯಸ್ಸು ಲಭಿಸುತ್ತದೆ. ಈ ಯೋಜನೆ ಇಡೀ ದೇಶಕ್ಕೆ ಮಾದರಿ. ಸಾರ್ವಜನಿಕರು ತಮ್ಮ ಖಾಲಿ ನಿವೇಶನಗಳಲ್ಲಿಮೇವುಬೆಳೆದು ಮೇವಿನ ಬ್ಯಾಂಕಿಗೆ ನೀಡುವ ಮೂಲಕ ಸೇವೆ ಸಲ್ಲಿಸಬಹುದು ಎಂದು ಸಚಿವಈಶ್ವರಪ್ಪ ಸಲಹೆ ನೀಡಿದರು.

ಆರ್‌ಎಸ್‌ಎಸ್‌ ಮುಖಂಡ ಪಟ್ಟಾಭಿರಾಮ್ ಮಾತನಾಡಿ, ಗೋವು ಮತ್ತು ಭೂಮಿಗೆ ಭಾರತದಲ್ಲಿ ಹಿಂದಿನಿಂದಲೂ ಪೂಜ್ಯಸ್ಥಾನ ನೀಡಲಾಗಿದೆ.ಈಚಿನ ದಿನಗಳಲ್ಲಿ ಇವೆರಡೂ ನಿರ್ಲಕ್ಷ್ಯಕ್ಕೆ ಒಳಗಾಗಿವೆ.ಮತ್ತೆ ನಾವು ಹಿಂದಿನ ಭಾರತದ ಸ್ಥಾನಕ್ಕೆ ಹೋಗಬೇಕಿದೆ.ಗೋವು, ಬ್ರಾಹ್ಮಣ ಶ್ರೇಷ್ಠ ಎಂದು ಶಾಸ್ತ್ರಗಳು ಹೇಳಿವೆ. ತಮ್ಮ ಸ್ವಾರ್ಥವನ್ನು ಬಿಟ್ಟು ಸಮಾಜಕ್ಕಾಗಿ ಅರ್ಪಿತವಾಗಿವೆ.ಗೋ ದಾನಕ್ಕೆ ನಮ್ಮ ದೇಶದಲ್ಲಿ ಅತ್ಯಂತ ಮಹತ್ವವಿದೆ.ಹಿಂದಿನ ಕಾಲದಲ್ಲಿ ಪೂರ್ವಿಕರು ಗೋಮಾಳಕ್ಕಾಗಿ ಜಮೀನುಗಳನ್ನುದಾನ ಮಾಡುತ್ತಿದ್ದರು. ಭೂಮಿ ಮತ್ತು ಗೋವನ್ನು ಸಂರಕ್ಷಿಸಿದರೆ ದೇಶದ ವಿಕಾಸವಾಗುತ್ತದೆ ಎಂದು ಕಿವಿಮಾತು ಹೇಳಿದರು.

ಎಸ್.ಕೆ.ಶೇಷಾಚಲ ಮಾತನಾಡಿ, ಪ್ರತಿ ಮನೆಯಲ್ಲೂ ಒಂದು ಕುಂಡದಲ್ಲಾದರು ಮೇವುಬೆಳೆದರೆ ಒಂದು ಹಸುವಿಗೆ ಒದಗಿಸಬಹುದು. ಟೆರೇಸ್ ಮೇಲೆ ಬೆಳೆಯಬಹುದು ಎಂದು ಸಲಹೆ ನೀಡಿದರು.

ಬಾಪೂಜಿ ಸಂಸ್ಥೆಯ ಮುಖ್ಯಸ್ಥ ಎಂ.ಪಿ.ಆರಾಧ್ಯ, ವಿಶ್ವಹಿಂದು ಪರಿಷತ್ ಅಧ್ಯಕ್ಷ ರಮೇಶ್ ಬಾಬು, ನಮ್ಮ ಕನಸಿನ ಶಿವಮೊಗ್ಗಅಧ್ಯಕ್ಷ ಎನ್‌.ಗೋಪಿನಾಥ್, ಬಿ.ಆರ್.ಮಧುಸೂದನ್, ಸುರೇಖಾ ಮುರಳೀಧರ್, ಅ.ನಾ.ವಿಜಯೇಂದ್ರ ರಾವ್ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT