ಸೋಮವಾರ, ಡಿಸೆಂಬರ್ 6, 2021
23 °C

ಶಿವಮೊಗ್ಗ: ಅಡಿಕೆ ಮಾರಾಟಕ್ಕೆ ಕಾಣದ ಒಲವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಒಂದೂವರೆ ತಿಂಗಳ ನಂತರ ಅಡಿಕೆ ವಹಿವಾಟು ಆರಂಭವಾದರೂ ಮಾರಾಟಕ್ಕೆ ಬೆಳೆಗಾರರು ಒಲವು ತೋರಿಲ್ಲ. ಸಹಕಾರ ಸಂಸ್ಥೆಗಳು, ಎಪಿಎಂಸಿ ಮಂಡಿಗಳೂ ಸೇರಿ ಮೂರು ದಿನಗಳಲ್ಲಿ 30 ಚೀಲ ಅಡಿಕೆ ಖರೀದಿಸಲೂ ಸಾಧ್ಯವಾಗಿಲ್ಲ.

ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ ಮೊದಲ ದಿನವೇ ರೈತರಿಂದ ಅಡಿಕೆ ಖರೀದಿಸಲು ಉತ್ಸಾಹ ತೋರಿತ್ತು. ಕೊರೊನಾ ಕಾರಣದಿಂದ ಅಡಿಕೆ ಮಾರುಕಟ್ಟೆ ಸ್ಥಗಿತವಾಗುವ ಮೊದಲು ಇದ್ದ ಕ್ವಿಂಟಲ್‌ಗೆ ₹ 36 ಸಾವಿರ ಗರಿಷ್ಠ ದರವನ್ನೂ ಟೆಂಡರ್‌ನಲ್ಲಿ ನಮೂದಿಸಿತ್ತು. ಮ್ಯಾಮ್‌ಕೋಸ್‌ ಪ್ರಾಂಗಣಕ್ಕೆ 140 ಮೂಟೆ ಅಡಿಕೆ ಬಂದರೂ, ನಮೂದಿತ ದರಕ್ಕೆ ಅಡಿಕೆ ಮಾರಾಟ ಮಾಡಿದ್ದು ಕೇವಲ 14 ಚೀಲ. ಅತ್ತ ಎಪಿಎಂಸಿ ಮಂಡಿಗಳಲ್ಲೂ ರೈತರು 10 ಚೀಲ ಅಡಿಕೆ ಮಾರಾಟ ಮಾಡಿಲ್ಲ. ವರ್ತಕರೂ ಉತ್ಸಾಹ ತೋರಿಲ್ಲ.

‘ಸಾಗಣೆ, ಕಾರ್ಮಿಕರ ಸಮಸ್ಯೆ ಇದೆ. ಪಾನ್‌ ಮಸಾಲ ಕಂಪನಿಗಳೂ ಪೂರ್ಣ ಉತ್ಪಾದನೆ ಆರಂಭಿಸಿಲ್ಲ. ಅಡಿಕೆ ವಹಿವಾಟು ಪೂರ್ಣ ಪ್ರಮಾಣದಲ್ಲಿ ನಡೆಯಲು ಸ್ವಲ್ಪ ಸಮಯ ಬೇಕಿದೆ’ ಎನ್ನುತ್ತಾರೆ ಶಿವಮೊಗ್ಗ ಅಡಿಕೆ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಮಲ್ಲಿಕಾರ್ಜುನ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು