ಶಿವಮೊಗ್ಗ: ಇಲ್ಲಿನ ಸೋಗಾನೆಯ ನೂತನ ವಿಮಾನ ನಿಲ್ದಾಣ ನೋಡಲು ತಾಲ್ಲೂಕಿನ ಲಿಂಗಾಪುರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹೋದಾಗ ಅವರನ್ನು ಒಳಗೆ ಬಿಟ್ಟಿರಲಿಲ್ಲ. ಹೀಗಾಗಿ ವಿಮಾನವನ್ನು ಹತ್ತಿರದಿಂದ ನೋಡಲು ಸಾಧ್ಯವಾಗಿರಲಿಲ್ಲ. ವಿದ್ಯಾರ್ಥಿಗಳು ನಿರಾಸೆಗೊಂಡಿದ್ದನ್ನೇ ಸವಾಲಾಗಿ ಸ್ವೀಕರಿಸಿದ್ದ ಶಾಲೆಯ ಶಿಕ್ಷಕ ವೃಂದ, ಈಗ ಶಾಲಾ ಪ್ರವಾಸಕ್ಕೆಂದು ಅವರನ್ನು ವಿಮಾನದಲ್ಲಿಯೇ ಬೆಂಗಳೂರಿಗೆ ಕರೆದೊಯ್ದಿದೆ.

ಶಾಲೆಯಲ್ಲಿರುವ 6 ಮತ್ತು 7ನೇ ತರಗತಿಯ 10 ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ ಈಚೆಗೆ ವಿಮಾನದಲ್ಲಿ ಬೆಂಗಳೂರಿಗೆ ತೆರಳಿ ಅಲ್ಲಿ ವಿಧಾನಸೌಧ, ನೆಹರೂ ತಾರಾಲಯ (ಪ್ಲಾನಿಟೋರಿಯಂ), ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ, ಹೈಕೋರ್ಟ್, ಲಾಲ್ಬಾಗ್ ಸೇರಿದಂತೆ ಬೇರೆ ಬೇರೆ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಊರಿಗೆ ಮರಳಿದ್ದಾರೆ.

‘ವರ್ಷದ ಹಿಂದೆ ಸೋಗಾನೆಯ ಹೊಸ ವಿಮಾನ ನಿಲ್ದಾಣಕ್ಕೆ ವಿದ್ಯಾರ್ಥಿಗಳು ಕರೆದೊಯ್ದಿದ್ದೆವು. ಅಲ್ಲಿ ಬೋರ್ಡಿಂಗ್ ಪಾಸ್ ಇಲ್ಲದ ಕಾರಣ ಒಳಗೆ ಬಿಟ್ಟಿರಲಿಲ್ಲ. ವಿದ್ಯಾರ್ಥಿಗಳು ನಿಲ್ದಾಣದ ಹೊರಗೆ ನಿಂತು ವಿಮಾನ ಆಕಾಶದಿಂದ ಕೆಳಗೆ ಇಳಿಯುವುದನ್ನು ಜಿಗಿದು, ಹಾರಿ ನೋಡಿದ್ದರು. ಅವರ ಕುತೂಹಲ ನೋಡಲಾಗದೇ ಮುಂದಿನ ವರ್ಷದ ಪ್ರವಾಸಕ್ಕೆ ವಿದ್ಯಾರ್ಥಿಗಳು ವಿಮಾನದಲ್ಲಿಯೇ ಕರೆದೊಯ್ಯೋಣ ಎಂದು ಅಂದೇ ಸಂಕಲ್ಪ ಮಾಡಿದ್ದೆವು’ ಎಂದು ಶಾಲೆಯ ಶಿಕ್ಷಕಿ ರೂಪಶ್ರೀ ನಾಗೇಂದ್ರ ಹೇಳುತ್ತಾರೆ.

ಮೊದಲಿಗೆ ಶಾಲೆಯ ಶಿಕ್ಷಕರೆಲ್ಲ ಸೇರಿ ಹಣ ಒಟ್ಟುಗೂಡಿಸಿ ಎರಡು ತಿಂಗಳು ಮೊದಲೇ ವಿಮಾನದ ಟಿಕೆಟ್ನ ಮುಂಗಡ ಬುಕ್ಕಿಂಗ್ ಮಾಡಿದ್ದೆವು. ನಂತರ ಆರ್ಥಿಕವಾಗಿ ಸಬಲರಾಗಿದ್ದ ಕೆಲವು ವಿದ್ಯಾರ್ಥಿಗಳು ಹಣ ವಾಪಸ್ ಕೊಟ್ಟರು ಎನ್ನುತ್ತಾರೆ.

ಶಿವಮೊಗ್ಗ–ಚಿಕ್ಕಮಗಳೂರು ಗಡಿಯಲ್ಲಿರುವ ಕಾಡಂಚಿನ ಲಿಂಗಾಪುರದ ಶಾಲೆಯ ಬಹಳಷ್ಟು ವಿದ್ಯಾರ್ಥಿಗಳು ಈ ಮೊದಲು ಕಾರು ಕೂಡ ಹತ್ತಿರಲಿಲ್ಲ. ಬಸ್ಸುಗಳಲ್ಲಿ ಓಡಾಡುವುದು ಅಪರೂಪವಾಗಿತ್ತು. ಶಾಲೆಯಲ್ಲಿ ಈ ಹಿಂದಿನ ಶೈಕ್ಷಣಿಕ ಪ್ರವಾಸಗಳನ್ನು ಟೆಂಪೊ ಟ್ರಾವೆಲ್ಸ್ ಹಾಗೂ ಬಸ್ಗಳಲ್ಲಿ ಸಂಚರಿಸಿ ಮುಗಿಸಿದ್ದ ವಿದ್ಯಾರ್ಥಿಗಳಿಗೆ ರೈಲಿನ ಪ್ರಯಾಣವೂ ಗೊತ್ತಿರಲಿಲ್ಲ. ಈಗ ಒಮ್ಮೆಲೆ ವಿಮಾನ ಏರಿದ್ದು ಅವರ ಸಂತಸವನ್ನು ಇಮ್ಮಡಿಗೊಳಿಸಿದೆ.

ಎರಡೂ ಅನುಭವ:

‘ಸೋಗಾನೆ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ಮುಗಿಸಿ ವಿಮಾನ ಏರಿ ಕುಳಿತಾಗಲಂತೂ ನಮ್ಮ ವಿದ್ಯಾರ್ಥಿಗಳ ಖುಷಿಗೆ ಪಾರವೇ ಇರಲಿಲ್ಲ. ಕಿಟಕಿಯಿಂದ ಇಣುಕಿ ಭೂಮಿಯನ್ನು ನೋಡಿದಾಗ ನಾವೂ (ಶಿಕ್ಷಕರು) ವಿಸ್ಮಯಗೊಂಡೆವು’ ಎಂದು ಮುಖ್ಯ ಶಿಕ್ಷಕಿ ಲತಾ ಹೇಳುತ್ತಾರೆ.

‘ಬೆಂಗಳೂರಿಗೆ ಹೋಗುವಾಗ ವಿಮಾನದಲ್ಲಿ ಕರೆದೊಯ್ದೆವು. ವಾಪಸ್ ಬರುವಾಗ ರೈಲಿನಲ್ಲಿ ಕರೆತಂದೆವು. ವಿದ್ಯಾರ್ಥಿಗಳಿಗೆ ಎರಡರಲ್ಲೂ ಪ್ರಯಾಣದ ಅನುಭೂತಿ ದೊರೆಯಿತು’ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಉಳಿಯಲು ಅಲ್ಲಿನ ರಾಜ್ಯ ಸರ್ಕಾರಿ ನೌಕರರ ಸಂಘದ ವಸತಿ ಗೃಹದಲ್ಲಿ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವಕಾಶ ಮಾಡಿಕೊಟ್ಟಿದ್ದರು. ಈ ಶೈಕ್ಷಣಿಕ ಪ್ರವಾಸವು ಮಕ್ಕಳಿಗೆ ಪುಸ್ತಕದಾಚೆಯ ಜ್ಞಾನ ನೀಡಿ, ಭವಿಷ್ಯದಲ್ಲಿ ದೊಡ್ಡ ಕನಸು ಕಾಣಲು ಪ್ರೇರಣೆ ನೀಡಿದೆ ಎಂದು ಅವರು ವಿವರಿಸಿದ್ದಾರೆ.

ಲಿಂಗಾಪುರ ಶಾಲೆಯಲ್ಲಿ ಒಟ್ಟು 36 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಲತಾ, ರೂಪಶ್ರೀ ಹಾಗೂ ಮೀನಾಕ್ಷಿ ಸೇರಿ ಮೂವರು ಶಿಕ್ಷಕಿಯರು ಹಾಗೂ ಅತಿಥಿ ಶಿಕ್ಷಕ ಸಂದೀಪ್ ಅಲ್ಲಿ ಕೆಲಸ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.