ಶಿವಮೊಗ್ಗ ಜಿಲ್ಲೆಯ ಗುಡ್ಡೇಕಲ್ಲು ಬೆಟ್ಟದ ಬಾಲ ಸುಬ್ರಹ್ಮಣ್ಯಸ್ವಾಮಿಯ ಅಡಿ ಕೃತ್ತಿಕಾ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಭರ್ಜರಿ ಚಾಲನೆ ದೊರೆತಿದೆ. ಮಲೆನಾಡು, ಮಧ್ಯ ಕರ್ನಾಟಕದಲ್ಲಿ ನೆಲೆಸಿರುವ ತಮಿಳು ಸಮುದಾಯದವರ ಆರಾಧ್ಯ ದೈವ ಬಾಲ ಸುಬ್ರಹ್ಮಣ್ಯಸ್ವಾಮಿಗೆ ಪ್ರತಿ ವರ್ಷ ಆಷಾಢ ಅಥವಾ ಶ್ರಾವಣ ಮಾಸದಲ್ಲಿ ಕೃತ್ತಿಕಾ ದಿನದಂದು ಎರಡು ದಿನಗಳ ಕಾಲ ಜಾತ್ರೆ ನಡೆಯುತ್ತದೆ.