ಶಿವಮೊಗ್ಗ: ಇಲ್ಲಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗಾಡಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಪರಿಸರ ಜಾಗೃತಿ ಮತ್ತು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಉಲ್ಲಾಸ್ ಮೆಸ್ತ, ಶಾಲೆಯ ಮುಖ್ಯ ಶಿಕ್ಷಕ ಕೆಂಡಪ್ಪ, ಒಕ್ಕೂಟದ ಅಧ್ಯಕ್ಷೆ ದಿವ್ಯಾ, ಯೋಜನೆಯ ಕೃಷಿ ಅಧಿಕಾರಿ ಎಂ. ರಾಘವೇಂದ್ರ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಲಯ ಮೇಲ್ವಿಚಾರಕ ಪ್ರಶಾಂತ ಸ್ವಾಗತಿಸಿದರು. ಒಕ್ಕೂಟದ ಸದಸ್ಯೆ ಸಿಂಧೂ ಪ್ರಾರ್ಥನೆ ಮಾಡಿದರು. ಸಂಘದ ಸದಸ್ಯರು, ಅರಣ್ಯಾಧಿಕಾರಿಗಳು ಮತ್ತು ಶಾಲೆಯ ಮಕ್ಕಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಾಲೆಯ ಆವರಣದ ಮುಂದೆ ಗಿಡ ನೆಡಲಾಯಿತು. ಸದಸ್ಯರಿಗೆ ಗಿಡ ವಿತರಣೆ ಮಾಡಲಾಯಿತು. ಈ ವೇಳೆ ಶಾಲೆಯ ಮಕ್ಕಳು ಮತ್ತು ಸದಸ್ಯರಿಗೆ ಪರಿಸರ ಸಂರಕ್ಷಣೆ ಮತ್ತು ಗಿಡ ನಾಟಿಯ ಬಗ್ಗೆ ಯೋಜನಾಧಿಕಾರಿ ಮಾಹಿತಿ ನೀಡಿದರು. ಪರಿಸರ ಕಾಳಜಿ ಬೆಳೆಸಿಕೊಳ್ಳಲು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗಾಡಿಕೊಪ್ಪ ಸೇವಾ ಪ್ರತಿನಿಧಿ ಸುಪ್ರಿಯಾ, ಆಲ್ಕೊಳ ಸೇವಾ ಪ್ರತಿನಿಧಿ ಪೂರ್ಣಿಮಾ ವಂದನಾರ್ಪಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.