ಸಾಹಿತ್ಯಿಕ ಮನಸ್ಸು ಇರುವವರು ಯಾರೂ ಸರ್ವಾಧಿಕಾರಿ ಆಗಲು ಸಾಧ್ಯವಿಲ್ಲ. ಆದರೆ, ಪಕ್ಷ ರಾಜಕಾರಣದ ಕೊಳಕನ್ನು ಸಾಹಿತ್ಯ ಪರಿಷತ್‌ಗೆ ಅಂಟಿಸಿದ ವ್ಯಕ್ತಿಯಿಂದ ಎಂದೂ ಬಾರದ ದುಷ್ಕಾಲ ಈಗ ಬಂದಿದೆ. ಅದಕ್ಕೆ ಕಡಿವಾಣ ಹಾಕಲು ಇದು ಗಾಂಧಿ ಮಾರ್ಗದ ಹೊರಾಟ.
-ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ
ಸಾಹಿತ್ಯ ಪರಿಷತ್ತು ಮಹೇಶ ಜೋಶಿಯವರ ಖಾಸಗಿ ಕಂಪೆನಿ ಅಲ್ಲ. ಬದಲಿಗೆ ಕನ್ನಡಿಗರ ಮಾಲೀಕತ್ವದ ಸಂಸ್ಥೆ. ಬೈಲಾ ತಿದ್ದುಪಡಿ ಮೂಲಕ ಜೋಶಿ ಅದರ ಆತ್ಮಗೌರವ ತಿರುಚಲು ಹೊರಟಿದ್ದಾರೆ. ಈ ಹೋರಾಟದಲ್ಲಿ ಕನ್ನಡಿಗರು, ಕನ್ನಡ ಸಾಹಿತ್ಯದ ಹಿತಾಸಕ್ತಿ ಅಡಗಿದೆ.