ಭದ್ರಾವತಿ: ಜ. 24 ರಿಂದ ಫೆ. 1ರ ವರೆಗೆ ನಗರದಲ್ಲಿ ಹಮ್ಮಿಕೊಂಡಿರುವ ತರಳಬಾಳು ಹುಣ್ಣಿಮೆ ಮಹೋತ್ಸವ– 2026ಕ್ಕೆ ಭದ್ರಾವತಿ ತಾಲ್ಲೂಕಿನ ಎಲ್ಲಾ ಸರ್ವ ಧರ್ಮಗಳು, ವಿವಿಧ ಸಂಘ ಸಂಸ್ಥೆಗಳು, ವಿವಿಧ ಸಂಘಟನೆಗಳು, ಅಧಿಕಾರಿ ವರ್ಗದವರು ಹಾಗೂ ನಾರಿಕರು ಸಹಕರಿಸು ಮೂಲಕ ಯಶಸ್ವಿಗೊಳಿಸಬೇಕೆಂದು ಸಾಧು ಸದ್ಧರ್ಮ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್ ಬಸವರಾಜಪ್ಪ ಮನವಿ ಮಾಡಿದರು.

ಶನಿವಾರ ಹಳೇ ನಗರದ ತಾಲ್ಲೂಕು ಕಚೇರಿ ರಸ್ತೆಯ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಿರಿಗೆರೆಯ ತರಳಬಾಳು ಮಠದ ಗುರುಗಳ ಆಜ್ಞೆಯಂತೆ ಯಾವುದೇ ರೀತಿಯ ಫ್ಲೆಕ್ಸ್ ಅಳವಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ತರಳಬಾಳು ಹುಣ್ಣಿಮೆ ಮಹೋತ್ಸವ ಯಶಸ್ವಿಯಾಗಿ ನಡೆಯಬೇಕೆಂದರೆ ಅಧಿಕಾರಿಗಳ ಸಹಕಾರ ಮುಖ್ಯ. ಸ್ವಚ್ಛತೆ, ರಸ್ತೆ ಗುಂಡಿಗಳ ದುರಸ್ತಿ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ನಗರ ಸಭೆಯ ಅಧ್ಯಕ್ಷರು, ತಾಲ್ಲೂಕು ದಂಡಾಧಿಕಾರಿಗಳು, ಆಯುಕ್ತರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಜಾತಿ ಧರ್ಮಗಳನ್ನೂ ಮೀರಿ ಭಾವೈಕ್ಯತೆಯಿಂದ ಆಚರಿಸಲಾಗುವ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಐತಿಹಾಸಿಕವಾಗಿ ಆಚರಿಸಲು ಭದ್ರಾವತಿಯ ಸಮಸ್ತ ನಾಗರಿಕರು ಸಹಕಾರ ನೀಡಬೇಕು. ತರಳಬಾಳು ಬ್ರಹನ್ಮಠದ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿರುವ 9 ದಿನಗಳ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವ ಜೊತೆಗೆ ಉತ್ಸವಕ್ಕೆ ₹ 25 ಲಕ್ಷ ದೇಣಿಗೆ ನೀಡುವುದಾಗಿ ಶಾಸಕ ಬಿ.ಕೆ. ಸಂಗಮೇಶ್ವರ್ ಭರವಸೆ ನೀಡಿದರು.

ನಗರಸಭೆ ಅಧ್ಯಕ್ಷೆ ಜೆ.ಸಿ. ಗೀತಾ ರಾಜಕುಮಾರ್, ಸದಸ್ಯರಾದ ಬಿ.ಕೆ. ಮೋಹನ್, ಬಿ.ಟಿ. ನಾಗರಾಜ್, ದಶರಥ ಗಿರಿ, ಸಾಧು ಸದ್ಧರ್ಮ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಜಿ. ರವಿಕುಮಾರ್, ಕೆ.ಹೆಚ್. ತೀರ್ಥಯ್ಯ,ಎಚ್.ಎಲ್. ಷಡಕ್ಷರಿ, ಸಂತೋಷ್, ಮಂಗೋಟೆ ರುದ್ರೇಶ್, ಎ.ಟಿ ರವಿ, ನಾಗರತ್ನ ವಾಗೀಶ್ ಕೋಟಿ, ಓಬಳೇಶ್, ಬಿ.ಕೆ. ಶಿವಕುಮಾರ್, ಬಿ.ಎಸ್. ಗಣೇಶ್, ಬಿ.ಕೆ. ಜಗನ್ನಾಥ್, ಕೆ.ಎಸ್. ವಿಜಯ್ ಕುಮಾರ್, ತಹಶೀಲ್ದಾರ್ ಪರುಸಪ್ಪ ಕುರಬರ, ಆಯುಕ್ತ ಕೆ.ಎನ್. ಹೇಮಂತ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.