ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾವರೆಕೊಪ್ಪ ಸಿಂಹಧಾಮಕ್ಕೆ ಬಂದ ನೂತನ ಅತಿಥಿ ನೀರುಕುದುರೆ ‘ದಿವಾ’

Last Updated 8 ನವೆಂಬರ್ 2021, 5:20 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ತಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಆಫ್ರಿಕಾ ಮೂಲದ ನೀರುಕುದುರೆ (ದಿವಾ)ಯೊಂದು ನೂತನ ಅತಿಥಿಯಾಗಿ ಆಗಮಿಸಿದೆ.

ಮೈಸೂರು ಮೃಗಾಲಯದಿಂದ ಶಿವಮೊಗ್ಗದ ಹುಲಿ-ಸಿಂಹಧಾಮಕ್ಕೆ ಗಂಡು ನೀರು ಕುದುರೆಯನ್ನು ಉಡುಗೊರೆಯಾಗಿ ನೀಡಲಾಗಿದೆ. ಆಫ್ರಿಕಾ ಮೂಲದ ಪ್ರಾಣಿಯಾಗಿರುವ ಇದು ಸುಮಾರು 40 ವರ್ಷ ಬದುಕಬಲ್ಲದು. ಮೈಸೂರು, ಬನ್ನೇರುಘಟ್ಟದಲ್ಲಿ ಮಾತ್ರ ಇದನ್ನು ನೋಡಬಹುದಾಗಿದೆ. ಇದೇ ಮೊದಲು ಶಿವಮೊಗ್ಗ ತಾವರೆಕೊಪ್ಪದ ಹುಲಿ–ಸಿಂಹಧಾಮಕ್ಕೆ ನೀರು ಕುದುರೆ ಆಗಮಿಸಿದೆ. ಅದು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡಿದ್ದು, ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದ್‌ಚಂದ್‌ ತಿಳಿಸಿದರು.

ಶೀಘ್ರವೇ ಮತ್ತೊಂದು ನೀರುಕುದುರೆ ಸಫಾರಿಗೆ: ಸಿಂಹಧಾಮಕ್ಕೆ ಗಂಡು ನೀರುಕುದುರೆ ಬಂದಿರುವುದರಿಂದ ಹೆಣ್ಣುಕುದುರೆಯೊಂದನ್ನು ಕಳುಹಿಸಿ ಕೊಡುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಮೈಸೂರು ಮೃಗಾಲಯದ ಅಧಿಕಾರಿ ಸ್ಪಂದಿಸಿದ್ದಾರೆ. ಶಿವಮೊಗ್ಗದ ಸಫಾರಿಗೆ ಆಗಮಿಸಿರುವ ನೂತನ ಅತಿಥಿ‌ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ ಎನ್ನುತ್ತಾರೆ ಮುಕುಂದ್‌ಚಂದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT