ಬುಧವಾರ, ಜುಲೈ 28, 2021
24 °C

ಜೋಗಕ್ಕೆ ಪ್ರವಾಸಿಗರ ಲಗ್ಗೆ: ಛಾಯಾಗ್ರಾಹಕರ ಸಂತಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಗಲ್: ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಸುರಿಯುತ್ತಿರುವ ಪುನರ್ವಸು ಮಳೆಯ ಕಾರಣದಿಂದ ಜಲಪಾತದಲ್ಲಿ ಜಲಸಿರಿಯ ಸಿಂಚನ ಪ್ರವಾಸಿಗರನ್ನು ಕೈ ಬೀಸಿ
ಕರೆಯುತ್ತಿದೆ.

ಕೊರೊನಾ ಲಾಕ್‌ಡೌನ್‌ ತೆರವಾಗಿರುವ ಕಾರಣ ಪ್ರವಾಸಿಗರು ಲಗ್ಗೆ ಇಡುತ್ತಿದ್ದು, 4 ತಿಂಗಳಿನಿಂದ ಬದುಕಿನ ಬಂಡಿ ಸಾಗಿಸಲು ಆಗದೆ ಸಂಕಷ್ಟದಲ್ಲಿದ್ದ ಛಾಯಾಗ್ರಾಹಕರ ಮೊಗದಲ್ಲಿ ಸಂತಸ ಮೂಡಿದೆ.

ಮೂಲೆಗಿರಿಸಿದ್ದ ಕ್ಯಾಮೆರಾವನ್ನು ಹೆಗಲಿಗೇರಿಸಿಕೊಂಡು ಜಲಪಾತದ ವಿವಿಧ ಕೋನಗಳಲ್ಲಿ ಕಂಡು ಬರುವ ಸೊಬಗನ್ನು ಸೆರೆ ಹಿಡಿದು ಪ್ರವಾಸಿಗರನ್ನು ಸೆಳೆಯುತ್ತಿದ್ದಾರೆ. 

‘ಜೋಗ ಜಲಪಾತ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ದೊರೆಯುವುದನ್ನೇ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದೆವು. ಅಂತೂ ಇಂತೂ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಿರುವುದು ಸಂತಸ ತಂದಿದೆ. ಪ್ರವಾಸಿಗರೂ ಬರುತ್ತಿದ್ದಾರೆ’ ಎಂದು ಛಾಯಾಗ್ರಾಹಕ ವೆಂಕಟೇಶ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು