ಜಾತಿ ವ್ಯವಸ್ಥೆ ಅಂತ್ಯ ಅಜ್ಜನ ಆಶಯ: ವೀರ ಸಾವರ್ಕರ್ ಮೊಮ್ಮಗ ಸಾತ್ಯಕಿ ಅಭಿಮತ

ಶಿವಮೊಗ್ಗ: ‘ಹಿಂದೂಗಳ ಏಕತೆಗೆ ಅಡ್ಡಿಯಾಗಿರುವ ಜಾತಿ ವ್ಯವಸ್ಥೆ ಅಂತ್ಯಗೊಳಿಸಬೇಕು ಎಂಬುದು ವೀರ ಸಾವರ್ಕರ್ ಅವರ ಆಶಯವಾಗಿತ್ತು. ಅವರ ವಿಚಾರಧಾರೆ ಆಚರಣೆಗೆ ತರಲು ಜಾತಿ ನಿರ್ಮೂಲನೆ ಹೋರಾಟ ಮತ್ತೆ ಆರಂಭಿಸಬೇಕಿದೆ’ ಎಂದು ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಹೇಳಿದರು.
ನಗರದ ಶ್ರೀಗಂಧ ಹಾಗೂ ಸಾಮಗಾನ ಸಂಸ್ಥೆಗಳಿಂದ ಶನಿವಾರ ಇಲ್ಲಿ ಆಯೋಜಿಸಿದ್ದ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ‘ಹಿಂದೂಗಳ ಶಕ್ತಿ ಕೇಂದ್ರ ಶಿವಮೊಗ್ಗ ಎಂಬುದು ಗೊತ್ತಿಲ್ಲದೇ ಕೆಲ ದಿನಗಳ ಹಿಂದೆ ವೀರ ಸಾವರ್ಕರ್ ಅವರಿಗೆ ಇಲ್ಲಿ ಅಪಮಾನ ಮಾಡಲಾಯಿತು. ಇದರ ಫಲವಾಗಿ ಸಾವರ್ಕರ್ ವಿಚಾರಧಾರೆ ಎಂಬ ಜ್ಯೋತಿ ಇಡೀ ರಾಜ್ಯಕ್ಕೆ ವ್ಯಾಪಿಸಿದೆ’ ಎಂದರು.
‘ಹಿಂದೂಗಳ ಸಂಘಟನೆ ಸಾವರ್ಕರ್ ಅವರ ಆಶಯವಾಗಿತ್ತು. ರಾಷ್ಟ್ರ ವಿರೋಧಿ ಶಕ್ತಿಗಳು ನಮ್ಮ ನಡುವೆ ಇವೆ. ಅವರೊಂದಿಗೆ ಹೋರಾಡಲು ಸಾವರ್ಕರ್ ಅವರ ಹಿಂದುತ್ವ ಮಂತ್ರವನ್ನು ಮತ್ತೆ ಜಾಗೃತ ಮಾಡಬೇಕಿದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.