ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ₹44 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

₹12 ಲಕ್ಷ ನಗದು ಕಳವು
Published 5 ಜೂನ್ 2024, 6:46 IST
Last Updated 5 ಜೂನ್ 2024, 6:46 IST
ಅಕ್ಷರ ಗಾತ್ರ

ತುಮಕೂರು: ನಗರದ ಅಮರಜ್ಯೋತಿ ನಗರದ ನಿವಾಸಿ ಕೆ.ಎಲ್‌.ಸುರೇಶ್‌ ಎಂಬುವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದು, ₹12 ಲಕ್ಷ ನಗದು, ₹44 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.

ಸುರೇಶ್‌ ಅಶೋಕ ರಸ್ತೆಯಲ್ಲಿರುವ ಸೂಪರ್‌ ಪಬ್‌ನ ಮಾಲೀಕರು. ಜೂನ್‌ 1ರಂದು ಕುಟುಂಬ ಸಮೇತ ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಬಾಗೇಶಪುರ ಗ್ರಾಮದ ದೇವಸ್ಥಾನಕ್ಕೆ ಹೋಗಿದ್ದರು. ಯಾರೂ ಇಲ್ಲದ ಸಮಯ ನೋಡಿಕೊಂಡು ಮನೆಯ ಕಿಟಕಿಯ ಗಾಜು ಹೊಡೆದು ಒಳ ನುಗ್ಗಿದ್ದಾರೆ. ನಗದು, ಆಭರಣ ಕದ್ದು ಪರಾರಿಯಾಗಿದ್ದಾರೆ.

ಚಿನ್ನದ ಹಾರ, ಓಲೆಗಳು, ಮುತ್ತಿನ ಹಾರ, ಉಂಗುರ, ಬಂಗಾರದ ಕಡಗ ಮತ್ತು ಇತರೆ ಆಭರಣಗಳು ಕಳ್ಳತನವಾಗಿವೆ. ಸುರೇಶ್‌ ಕುಟುಂಬದವರು ಸೋಮವಾರ ವಾಪಸ್‌ ಬಂದು ನೋಡಿದಾಗ ಕಳ್ಳತನ ಆಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT