ಶುಕ್ರವಾರ, ಸೆಪ್ಟೆಂಬರ್ 25, 2020
29 °C

ತುಮಕೂರು: ಕೋವಿಡ್-19ನಿಂದ 197 ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತ 197 ಮಂದಿ ಗುಣಮುಖರಾಗಿದ್ದು ಸೋಮವಾರ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಕೇಂದ್ರಗಳಿಂದ ಮನೆಗೆ ತೆರಳಿದರು. ಇಲ್ಲಿಯವರೆಗೂ 5,580 ಮಂದಿ ಚೇತರಿಸಿಕೊಂಡಿದ್ದಾರೆ.

ಸೋಮವಾರ ಮತ್ತೆ 150 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಅಲ್ಲದೆ ಆರು ಮಂದಿ ಮೃತಪಟ್ಟಿದ್ದಾರೆ. ನಗರದ ಕೋತಿತೋಪಿನ 55 ವರ್ಷದ ಮಹಿಳೆ, ಉಪ್ಪಾರಹಳ್ಳಿ 75 ವರ್ಷದ ಪುರುಷ, ತುಮಕೂರು ತಾಲ್ಲೂಕು ಹೊನ್ನುಡಿಕೆ ಗ್ರಾಮದ 60 ವರ್ಷದ ಮಹಿಳೆ, ಮಧುಗಿರಿ ತಾಲ್ಲೂಕು ದೊಡ್ಡಮಾಲೂರು ಗ್ರಾಮದ 88 ವರ್ಷದ ಪುರುಷ, ಗುಬ್ಬಿ ತಾಲ್ಲೂಕು ಹರಿವೇಸಂದ್ರದ 65 ವರ್ಷದ ಪುರುಷ, ಪಾವಗಡ ತಾಲ್ಲೂಕು ಪಳವಳ್ಳಿ ಗ್ರಾಮದ 50 ವರ್ಷದ ಪುರುಷ ಮೃತಪಟ್ಟಿದ್ದಾರೆ.

ಇವರಲ್ಲಿ ಇಬ್ಬರು ಅನ್ಯಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಆ ನಂತರ ಕೊರೊನಾ ಸೋಂಕು ತಗುಲಿತ್ತು. ಸೋಂಕು ತಗುಲಿದವರಲ್ಲಿ 83 ಪುರುಷರು ಹಾಗೂ 67 ಮಹಿಳೆಯರು ಇದ್ದಾರೆ.

***

ತಾಲ್ಲೂಕು;ಇಂದಿನ ಸೋಂಕಿತರು (ಸೆ.7);ಒಟ್ಟು ಸೋಂಕಿತರು;ಮರಣ

ಚಿ.ನಾ.ಹಳ್ಳಿ;;448;4

ಗುಬ್ಬಿ;20;534;11

ಕೊರಟಗೆರೆ;6;375;7

ಕುಣಿಗಲ್;3;582;13

ಮಧುಗಿರಿ;13;511;7

ಪಾವಗಡ;14;671;12

ಶಿರಾ;14;541;7

ತಿಪಟೂರು;37;671;9

ತುಮಕೂರು;26;2,765;121

ತುರುವೇಕೆರೆ;10;428;5

ಒಟ್ಟು;150;7,526;196

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು